ಕೋವಿಡ್-19ಗೆ ತತ್ತರಿಸಿದ ವಿಶ್ವ: 30 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, 2.7 ಲಕ್ಷ ಬಲಿ!

ಜಗತ್ತಿನಾದ್ಯಂತ ಕೊರೋನಾ ಸೋಂಕು ವೇಗವಾಗಿ ಹರುಡುತ್ತಿದ್ದು, ತಗ್ಗುವ ಲಕ್ಷಣಗಳೇ ಕಾಣುತ್ತಿಲ್ಲ. ವಿಶ್ವದ 210 ದೇಶಗಳಲ್ಲಿ ಈ ಸೋಂಕು ಜನರ ನಿದ್ದೆಗೆಡಿಸಿದೆ. ಅಲ್ಲದೆ ಕೊರೊನಾ ಪೀಡಿತರ ಸಂಖ್ಯೆ 30 ಲಕ್ಷದ ಗಡಿ ದಾಟಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಜಗತ್ತಿನಾದ್ಯಂತ ಕೊರೋನಾ ಸೋಂಕು ವೇಗವಾಗಿ ಹರುಡುತ್ತಿದ್ದು, ತಗ್ಗುವ ಲಕ್ಷಣಗಳೇ ಕಾಣುತ್ತಿಲ್ಲ. ವಿಶ್ವದ 210 ದೇಶಗಳಲ್ಲಿ ಈ ಸೋಂಕು ಜನರ ನಿದ್ದೆಗೆಡಿಸಿದೆ. ಅಲ್ಲದೆ ಕೊರೊನಾ ಪೀಡಿತರ ಸಂಖ್ಯೆ 30 ಲಕ್ಷದ ಗಡಿ ದಾಟಿದೆ. 

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದ(ಸಿಎಸ್ ಎಸ್ ಇ) ಪ್ರಕಾರ, ವಿಶ್ವಾದ್ಯಂತ ಈ ಮಾರಕ ವೈರಸ್ ನಿಂದ 3,014,000 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಮತ್ತು 2.07 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಕೊರೊನಾ ವೈರಸ್ ಭಾರತದಲ್ಲಿಯೂ ವೇಗವಾಗಿ ಹರಡುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಈವರೆಗೆ 28,380 ಜನರು ಸೋಂಕಿಗೆ ಒಳಗಾಗಿದ್ದು, 886 ಜನರು ಸಾವನ್ನಪ್ಪಿದ್ದಾರೆ. 

ಅಮೆರಿಕದಲ್ಲಿ ಇಲ್ಲಿಯವರೆಗೆ 9.87 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೆ 55,415 ಜನರು ಸಾವನ್ನಪ್ಪಿದ್ದಾರೆ.

ಯುರೋಪಿಯನ್ ನಲ್ಲೂ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾಗಿದೆ. ಇಟಲಿಯಲ್ಲಿ 1.98 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, ಮತ್ತು ಇದುವರೆಗೆ 26,644 ಜನರು ಸಾವನ್ನಪ್ಪಿದ್ದಾರೆ. ಸ್ಪೇನ್ ನಲ್ಲಿ 2.29 ಲಕ್ಷ ಜನರು ತುತ್ತಾಗಿದ್ದು, 23,521 ಜನರು ಸಾವನ್ನಪ್ಪಿದ್ದಾರೆ.

ಫ್ರಾನ್ಸ್ ನಲ್ಲಿ 1.63 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 22,890 ಜನರು ಸಾವನ್ನಪ್ಪಿದ್ದಾರೆ. ಜರ್ಮನಿಯಲ್ಲಿ 1.58 ಲಕ್ಷ ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 5,984 ಜನರು ಸಾವನ್ನಪ್ಪಿದ್ದಾರೆ.

ಇಂಗ್ಲೆಂಡ್ ನಲ್ಲಿ 1.55 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 20,794 ಜನರು ಸಾವನ್ನಪ್ಪಿದ್ದಾರೆ. ಇರಾನ್ ನಲ್ಲಿ 90,481 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 5,710 ಜನರು ಸಾವನ್ನಪ್ಪಿದ್ದಾರೆ. ರಷ್ಯಾದಲ್ಲಿ ಈವರೆಗೆ 80,949 ಕರೋನಾ ಸೋಂಕಿನ ಪ್ರಕರಣಗಳು ದೃಢಪಟ್ಟಿದೆ ಮತ್ತು ಈ ಸಾಂಕ್ರಾಮಿಕ ರೋಗದಿಂದ 747 ಜನರು ಸಾವನ್ನಪ್ಪಿದ್ದಾರೆ.

ಬೆಲ್ಜಿಯಂನಲ್ಲಿ 7094, ನೆದರ್ಲ್ಯಾಂಡ್ ನಲ್ಲಿ 4491, ಬ್ರೆಜಿಲ್ ನಲ್ಲಿ 4286, ಟರ್ಕಿಯಲ್ಲಿ 2905, ಕೆನಡಾದಲ್ಲಿ 2663, ಸ್ವೀಡನ್ ನಲ್ಲಿ 2194, ಸ್ವಿಟ್ಜರ್ಲೆಂಡ್ ನಲ್ಲಿ 1610 ಮತ್ತು ಮೆಕ್ಸಿಕೋದಲ್ಲಿ 1391 ಜನರು ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದಲ್ಲಿ 13,328 ಜನರು ಕೊರೆನಾ ವೈರಸ್ ಸೋಂಕಿಗೆ ಒಳಗಾಗಿದ್ದು, 281 ಜನರು ಸಾವನ್ನಪ್ಪಿದ್ದಾರೆ.

ಈ ರೋಗದ ಕೇಂದ್ರವಾದ ಚೀನಾದಲ್ಲಿ ಇಲ್ಲಿಯವರೆಗೆ 83,912 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 4,637 ಜನರು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com