ದುಪ್ಪಟ್ಟು ಬೆಲೆಗೆ ಟೆಸ್ಟ್ ಕಿಟ್ ಖರೀದಿ ವಿವಾದ ಬೆನ್ನಲ್ಲೇ ಚೀನಾ ಟೆಸ್ಟಿಂಗ್ ಕಿಟ್ ಆರ್ಡರ್ ರದ್ದುಪಡಿಸಿದ ಭಾರತ

ದುಪ್ಪಟ್ಟು ಬೆಲೆಗೆ ರ್ಯಾಪಿಡ್ ಟೆಟ್ಸ್ ಕಿಟ್ ಖರೀದಿ ಮಾಡಿರವ ವಿವಾದ ಬೆನ್ನಲ್ಲೇ ಈಗಾಗಲೇ ಚೀನಾ ಕಂಪನಿಯಿಂದ ರ್ಯಾಪಿಡ್ ಟೆಸ್ಟಿಂಗ್ ಕಿಟ್ಸ್ ಗಳ ಖರೀದಿ ಆರ್ಡರ್'ನ್ನು ಭಾರತ ಸಂಪೂರ್ಣವಾಗಿ ರದ್ದುಪಡಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದುಪ್ಪಟ್ಟು ಬೆಲೆಗೆ ರ್ಯಾಪಿಡ್ ಟೆಟ್ಸ್ ಕಿಟ್ ಖರೀದಿ ಮಾಡಿರವ ವಿವಾದ ಬೆನ್ನಲ್ಲೇ ಈಗಾಗಲೇ ಚೀನಾ ಕಂಪನಿಯಿಂದ ರ್ಯಾಪಿಡ್ ಟೆಸ್ಟಿಂಗ್ ಕಿಟ್ಸ್ ಗಳ ಖರೀದಿ ಆರ್ಡರ್'ನ್ನು ಭಾರತ ಸಂಪೂರ್ಣವಾಗಿ ರದ್ದುಪಡಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ. 

ಚೀನಾದಿಂದ ಪೂರೈಕೆಯಾದ ಕಿಟ್ ಗಳ ಗುಣಮಟ್ಟದ ಬಗ್ಗೆ ದೂರುಗಳು ದಾಖಲಾದ ಹಿನ್ನಲೆಯೆಲ್ಲಿ ಭಾರತ ಆರ್ಡರ್ ಗಳನ್ನು ರದ್ದುಪಡಿಸಿದೆ. 

ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದನ್ ಹಾಗೂ ಐಎಂಸಿಆರ್ ಅಧಿಕಾರಿಗಳೊಂದಿಗೆ ಸಬೆ ನಡೆಸಿದ್ದು, ಸಭೆ ಬಳಿಕ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. 

ಮಾರ್ಚ್ 27 ರಂದು ಸರ್ಕಾರ ಚೀನಾದ ವೊಂಡ್ ಫೋ ಬಯೋಟೆಕ್'ಗೆ 5 ಲಕ್ಷ ರ್ಯಾಪಿಡ್ ಆ್ಯಂಡಿಬಾಡಿ ಟೆಸ್ಟಿಂಗ್ ಕಿಟ್ ಗಳಿಗೆ ಆರ್ಡರ್ ನೀಡಿತ್ತು. ಮ್ಯಾಟ್ರಿಕ್ಸ್ ಎಂಬ ಸಂಸ್ಥೆಯು ಪ್ರತಿ ಕಿಟ್'ಗೆ ರೂ.245 ರಂತೆ ಚೀನಾದಿಂದ ಖರೀದಿಸಿ, ಅವುಗಲನ್ನು ಭಾರತಕ್ಕೆ ಆಮದು ಮಾಡುತ್ತಿತ್ತು. 

ರಿಯಲ್ ಮೊಟಾಬೊಲಿಕ್ಸ್ ಮತ್ತು ಅರ್ಕ ಫಾರ್ಮಾ ಎಂಬ ವಿತರಣಾ ಸಂಸ್ಥೆಗಳ ಮೂಲಕ ಇವುಗಳನ್ನು ರಾಜ್ಯ ಸರ್ಕಾರಗಳಿಗೆ ಒಂದಕ್ಕೆ ರೂ.600ರಂತೆ ಮಾರಾಟ ಮಾಡಲಾಗಿತ್ತು. ಆದರೆ, ಕಿಟ್ ಗಳ ಮಾರಾಟದ ಮೇಲೆ ಖಾಸಗಿ ಸಂಸ್ಥೆಯು ಹೆಚ್ಚಿನ ಲಾಭ ಪಡೆಯುತ್ತಿದೆ. ಇವುಗಳ ಅಸಲಿ ಬೆಲೆಗೆ ದುಪ್ಪಟ್ಟು ಬೆಲೆಯನ್ನು ಸರ್ಕಾರಗಳು ಪಾವತಿಸುತ್ತಿವೆ ಎಂದು ನ್ಯಾಯಾಲಯದಲ್ಲಿ ದೂರೊಂದು ದಾಖಲಾಗಿತ್ತು. 

ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ನ್ಯಾಯಾಲಯ, ಪ್ರತಿ ಕಿಟ್ ಬೆಲೆಯನ್ನು ರೂ.400ಕ್ಕೆ ನಿಗದಿಪಡಿಸಿ ಮಾರಾಟಕ್ಕೆ ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶದ ಮರುದಿನವೇ ಇದೀಗ ಭಾರತ ಸರ್ಕಾರ ಚೀನಾ ಸಂಸ್ಥೆಯೊಂದಿಗೆ ಮಾಡಲಾಗಿದ್ದ ಆರ್ಡರ್ ಗಳನ್ನು ರದ್ದುಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com