ಕೋಳಿ ಸಾಗಿಸುತ್ತಿದ್ದ ವಾಹನ- ಲಾರಿ ನಡುವೆ ಡಿಕ್ಕಿ: ನಾಲ್ವರು ಸಾವು, ಓರ್ವ ಗಂಭೀರ ಗಾಯ

ಜಿಲ್ಲೆಯ ಮನ್ನಾರ್‌ಗುಡಿ ಬಳಿಯ ನೆಡುವಕೋಟೈನಲ್ಲಿ ಶನಿವಾರ ಕೋಳಿ ತುಂಬಿದ ವಾಹನವೊಂದು ರಸ್ತೆಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುವರೂರು(ತಮಿಳುನಾಡು): ಜಿಲ್ಲೆಯ ಮನ್ನಾರ್‌ಗುಡಿ ಬಳಿಯ ನೆಡುವಕೋಟೈನಲ್ಲಿ ಶನಿವಾರ ಕೋಳಿ ತುಂಬಿದ ವಾಹನವೊಂದು ರಸ್ತೆಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಸರಕು ವಾಹಕದ ಚಾಲಕ ವೆಂಕಟರಮಣ ಹಾಗೂ ಚಂದ್ರಶೇಖರ್, ವೆಂಕಟಾಚಲಂ ಮತ್ತು ಪಶ್ಚಿಮ ಬಂಗಾಳ ಮೂಲದ ಶಿಬು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರೂರಿನಿಂದ ಮನ್ನಾರ್‌ಗುಡಿಗೆ ಹೋಗುವ ಮಾರ್ಗದ ಮಧ್ಯೆ ಲಾರಿಯ ಚಾಲಕ ಟೈರ್‌ಗಳ ಗಾಳಿ ಮಟ್ಟವನ್ನು ಪರೀಕ್ಷಿಸಲು ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದ. ಇದೇ ವೇಳೆ, ಪಲ್ಲಡಂನಿಂದ ತಿರುತುರೈಪೂಂಡಿಗೆ ಹೋಗುತ್ತಿದ್ದ ಕೋಳಿ ತುಂಬಿದ ಸರಕು ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com