ರೂಪಾಂತರಿ ಕೊರೋನಾ ವೈರಸ್ ಭಾರತ ಪ್ರವೇಶಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ಕೊರೋನಾ ರೂಪಾಂತರ ಸೋಂಕು ಭಾರತಕ್ಕೆ ಪ್ರವೇಶಿಸಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ಕೊರೋನಾ ರೂಪಾಂತರ ಸೋಂಕು ಭಾರತಕ್ಕೆ ಪ್ರವೇಶಿಸಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ. ಪಾಲ್ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ. ಈ ರೂಪಾಂತರ ಸೋಂಕು ದೇಶವನ್ನು ಪ್ರವೇಶಿಸದಂತೆ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ಜನತೆ ಆತಂಕಕ್ಕೆ ಒಳಗಾಗಬೇಕಿಲ್ಲ. ಹಾಗೆಂದ ಮಾತ್ರಕ್ಕೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಕೇಂದ್ರ ಸರ್ಕಾರ ತಿಳಿಸಿದರು.

ಈ ಪರಿವರ್ತಿತ ಸೋಂಕು ಅಪಾಯಕಾರಿಯೂ ಅಲ್ಲ. ಕೊರೋನಾ ಸೋಂಕಿನ ಹೊಸ ರೂಪಾಂತರವು ರೋಗ ಉಲ್ಬಣ ಮತ್ತು ಸಾವು-ನೋವಿಗೆ ಕಾರಣವಾಗುತ್ತಿಲ್ಲ. ಕೋವಿಡ್-೧೯ ನಿಯಂತ್ರಣಕ್ಕೆ ಈಗಾಗಲೇ ಅಭಿವೃದ್ಧಿಪಡಿಸಿರುವ ಲಸಿಕೆ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಈ ನಡುವೆ ಐಸಿಎಂಆರ್ ಕೂಡ ಹೇಳಿಕೆ ನೀಡಿದ್ದು, ಬ್ರಿಟನ್ನಿನಲ್ಲಿ ಪತ್ತೆಯಾಗಿರುವ ಕೊರೋನಾ ವೈರಸ್'ನ ಹೊಸ ಪ್ರಭೇದ ಭಾರತದಲ್ಲಿ ಇನ್ನೂ ಯಾರಲ್ಲೂ ಪತ್ತೆಯಾಗಿಲ್ಲ ಎಂದಿದೆ. 

ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್ಐವಿ)ಯಲ್ಲಾಗಲೀ ಅಥವಾ ದೇಶದಾದ್ಯಂತ ಇರುವ ಯಾವುದೇ ಪ್ರಯೋಗಾಲಯದಲ್ಲಾಗಲೀ ಇಲ್ಲಿಯವರೆಗೂ ಬ್ರಿಟನ್ನಿನಲ್ಲಿ ಪತ್ತೆಯಾದ ಕೊರೋನಾ ತಳಿ ಪತ್ತೆಯಾಗಿಲ್ಲ. ನಮ್ಮಲ್ಲೇ ಈ ವರೆಗೆ ಕೊರೋನಾದ ಕೆಲ ಹೊಸ ಪ್ರಭೇದಗಳು ಪತ್ತೆಯಾಗಿದ್ದು, ಅವುಗಳಾವುದೂ ಅಪಾಯಕಾರಿಯಲ್ಲ. ಇನ್ನು ಬ್ರಿಟನ್ನಿನಲ್ಲಿ ಪತ್ತೆಯಾಗಿರುವ ಹೊಸ ತಳಿ ಕೂಡ ಈಗಿರುವ ಕೊರೋನಾ ವೈರಸ್'ಗಿಂತ ಹೆಚ್ಚು ಅಪಯಕಾರಿಯಲ್ಲ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಈಗ ಬಿಡುಗಡೆಯಾಗಿರುವ ಲಸಿಕೆಗಳು ಈ ವೈರಸ್ ವಿರುದ್ಧ ಕಡಿಮೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದಕ್ಕೂ ಯಾವುದೇ ಸಾಕ್ಷ್ಯವಿಲ್ಲ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com