ನವದೆಹಲಿ: ಸರ್ಕಾರಿ ಶಾಲೆ ಮಕ್ಕಳ ಡ್ಯಾನ್ಸ್ ಗೆ ಮನಸೋತ ಮೆಲಾನಿಯಾ ಟ್ರಂಪ್ !ವಿಡಿಯೋ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್  ಭಾರತದಲ್ಲಿನ ಶಿಕ್ಷಣ ವ್ಯವಸ್ಥೆ ಕುರಿತು ಅರಿಯಲು ಇಂದು ನಾನಕ್ ಪುರದಲ್ಲಿನ ಸರ್ವೋದಯ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಭೇಟಿ ನೀಡಿದರು.
ಶಾಲಾ ಮಕ್ಕಳೊಂದಿಗೆ ಮೆಲಾನಿಯಾ ಟ್ರಂಪ್
ಶಾಲಾ ಮಕ್ಕಳೊಂದಿಗೆ ಮೆಲಾನಿಯಾ ಟ್ರಂಪ್
Updated on: 

ನವದೆಹಲಿ:ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್  ಭಾರತದಲ್ಲಿನ ಶಿಕ್ಷಣ ವ್ಯವಸ್ಥೆ ಕುರಿತು ಅರಿಯಲು ಇಂದು ನಾನಕ್ ಪುರದಲ್ಲಿನ ಸರ್ವೋದಯ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಭೇಟಿ ನೀಡಿದರು.

ಭಾರತೀಯ ಸಂಪ್ರದಾಯದಂತೆ ಉಡುಗೆ ತೊಟ್ಟಿದ್ದ ಮಕ್ಕಳು ಮೆಲಾನಿಯಾ ಅವರ ಹಣೆಗೆ ತಿಲಕವನ್ನಿಟ್ಟು ಸ್ವಾಗತಿಸಿದರು ಇದೇ ಸಂದರ್ಭದಲ್ಲಿ  ಹೆಣ್ಣು ಮಕ್ಕಳು ಪ್ರಸ್ತುತಪಡಿಸಿದ ನೃತ್ಯಕ್ಕೆ ಮನಸೋತ ಮೆಲಾನಿಯಾ, ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸುವುದರ ಜೊತೆಗೆ ಮಕ್ಕಳೊಂದಿಗೆ ಬೆರೆತು ಸಂತಸಪಟ್ಟಿದ್ದಾರೆ.

. ವೇದಿಕೆ ಮೇಲೆ ಹೆಣ್ಣು ಮಕ್ಕಳು ನೃತ್ಯ ಪ್ರದರ್ಶಿಸುತ್ತಿದ್ದರೆ ವೇದಿಕೆ ಕೆಳಗೆ ಕುಳಿತಿದ್ದ ಮಕ್ಕಳು ಕೂಡಾ ಡ್ಯಾನ್ಸ್  ಮಾಡಿದರು. ಮೆಲಾನಿಯಾ ಅವರು ಸುಮಾರು 1 ಗಂಟೆಯ ಕಾಲ ಮಕ್ಕಳೊಂದಿಗೆ ಬೆರೆತು ಎಂಜಾಯ್ ಮಾಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com