ಕುಡಿದು ಚಾಲನೆಗೆ ದಂಡ ವಿಧಿಸಿದ್ದಕ್ಕೆ ಆಕ್ರೋಶ: ಬೈಕ್‍ಗೆ ಬೆಂಕಿಯಿಟ್ಟ ಯುವಕ, ವಿಡಿಯೋ ವೈರಲ್!

ಬೈಕ್ ಸವಾರನೊಬ್ಬ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಟ್ರಾಫಿಕ್ ಪೊಲೀಸರು ಆತನ ಬೈಕ್ ವಶಕ್ಕೆ ಪಡೆದು ದಂಡ ವಿಧಿಸಿದ್ದಕ್ಕೆ ಆಕ್ರೋಶಗೊಂಡ ಸವಾರ ತನ್ನ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ.
ಘಟನೆ ಚಿತ್ರ
ಘಟನೆ ಚಿತ್ರ

ನವದೆಹಲಿ: ಬೈಕ್ ಸವಾರನೊಬ್ಬ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಟ್ರಾಫಿಕ್ ಪೊಲೀಸರು ಆತನ ಬೈಕ್ ವಶಕ್ಕೆ ಪಡೆದು ದಂಡ ವಿಧಿಸಿದ್ದಕ್ಕೆ ಆಕ್ರೋಶಗೊಂಡ ಸವಾರ ತನ್ನ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ.

ಸಂಚಾರಿ ಪೊಲೀಸರು ಚಿರಾಗ್ ದೆಹಲಿಯ ತ್ರಿವೇಣಿ ಕಾಂಪ್ಲೆಕ್ಸ್ ಹತ್ತಿರ ಬೈಕ್ ಒಂದನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಸವಾರ ರಾಕೇಶ್ ಕುಡಿದು ಬೈಕ್ ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಬೈಕ್ ಸವಾರ ತನ್ನ ಬೈಕ್ ಗೆ ಬೆಂಕಿ ಇಟ್ಟಿದ್ದಾನೆ. 

ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಮಾಳವಿಯಾ ನಗರ ಪೊಲೀಸರು ರಾಕೇಶ್ ನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com