ಪ್ರಧಾನಿ ಮೋದಿ ಭೇಟಿಯಾದ ತೆಲುಗು ನಟ ಮೋಹನ್ ಬಾಬು

ಖ್ಯಾತ ಚಿತ್ರನಟ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಾಂಚು ಮೋಹನ್ ಬಾಬು ಅವರು ಸೋಮವಾರ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಮೋದಿ ಜತೆ ಮೋಹನ್ ಬಾಬು ಕುಟುಂಬ
ಮೋದಿ ಜತೆ ಮೋಹನ್ ಬಾಬು ಕುಟುಂಬ
Updated on

ವಿಜಯವಾಡ: ಖ್ಯಾತ ಚಿತ್ರನಟ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಾಂಚು ಮೋಹನ್ ಬಾಬು ಅವರು ಸೋಮವಾರ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ತಮ್ಮ ಪುತ್ರರಾದ ವಿಷ್ಣು, ಮನೋಜ್, ಪುತ್ರಿ ಹಾಗೂ ನಟಿ ಲಕ್ಷ್ಮೀ ಮಾಂಚು ಮತ್ತು ಸೊಸೆ ವಿರೋನಿಕಾ ಪ್ರಧಾನಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಮೋಹನ್ ಬಾಬು, ತೆಲಗು ದೇಸಂ ಪಕ್ಷದ ಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ ಆಪ್ತರಾಗಿದ್ದಾರೆ. ನಂತರ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com