ಇರಾಕ್'ನಲ್ಲಿ ಉದ್ವಿಗ್ನಗೊಂಡ ವಾತಾವರಣ: ಸುರಕ್ಷಿತರಾಗಿರುವಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದ ಭಾರತ

ಇರಾನ್ ಹಾಗೂ ಅಮೆರಿಕಾ ನಡುವಿನ ವೈಷಮ್ಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಇರಾಕ್'ನಲ್ಲಿರುವ ಅಮೆರಿಕಾ ವಾಯುನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಹಿನ್ನಲೆಯಲ್ಲಿ ಇರಾಕ್ ನಲ್ಲಿರುವ ಭಾರತೀಯ ಪ್ರಜೆಗಳು ಸುರಕ್ಷಿತರಾಗಿರುವಂತೆ ಭಾರತ ಸಲಹೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇರಾನ್ ಹಾಗೂ ಅಮೆರಿಕಾ ನಡುವಿನ ವೈಷಮ್ಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಇರಾಕ್'ನಲ್ಲಿರುವ ಅಮೆರಿಕಾ ವಾಯುನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಹಿನ್ನಲೆಯಲ್ಲಿ ಇರಾಕ್ ನಲ್ಲಿರುವ ಭಾರತೀಯ ಪ್ರಜೆಗಳು ಸುರಕ್ಷಿತರಾಗಿರುವಂತೆ ಭಾರತ ಸಲಹೆ ನೀಡಿದೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವಿದೇಸಾಂಗ ಇಲಾಕೆ ವಕ್ತಾರ ರವೀಶ್ ಕುಮಾರ್ ಅವರು, ಇರಾಕ್ ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದು, ಭಾರತೀಯ ಪ್ರಜೆಗಳು ಇರಾಕ್'ಗೆ ತೆರಳದಂತೆ ಸಲಹೆ ನೀಡಿದ್ದಾರೆ. ಅಲ್ಲದೆ, ಇರಾಕ್ ನಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು ಸುರಕ್ಷಿತರಾಗಿರುವಂತೆ ತಿಳಿಸಿದ್ದಾರೆ. 

ಇರಾಕ್ ನಲ್ಲಿ ನೆಲೆಯುೂರಿರುವ ಭಾರತೀಯರಿಗೆ ಎಲ್ಲಾ ರೀತಿಯ ಸೇವೆಗಳನ್ನು ಸಲ್ಲಿಸಲು ಬಾಗ್ದಾದ್ ಹಾಗೂ ಎರ್ಬಿಲ್ ನಲ್ಲಿ ರಾಯಭಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಇರಾನ್, ಇರಾಕ್'ಗೆ ವಿಮಾನಗಳಲ್ಲಿ ಪ್ರಯಾಣ ಬೆಳೆಸುವುದರಿಂದ ಭಾರತೀರು ದೂರವಿರಿ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com