ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಮೆರಿಕದೊಂದಿಗೆ ಸಂಘರ್ಷ: ಭಾರತದ ಸಂಧಾನ ಮಧ್ಯಸ್ಥಿಕೆಗೆ ಇರಾನ್ ಸ್ವಾಗತ

ಸೇನಾ ಕಮಾಂಡರ್ ಹತ್ಯೆ ಬಳಿಕ ಅಮೆರಿಕ ಮತ್ತು ಇರಾನ್ ಸಂಘರ್ಷ ತಾರಕ್ಕೇರಿರುವಂತೆಯೇ ಇತ್ತ ಸಂಯಮ ಕಾಪಾಡಿಕೊಳ್ಳುವಂತೆ ಭಾರತ ಮಾಡಿರುವ ಮನವಿಗೆ ಸ್ಪಂದಿಸಿರುವ ಇರಾನ್, ಭಾರತದ ಸಂಧಾನ ಮಧ್ಯಸ್ಥಿಕೆಗೆ ಎಂದು ಹೇಳಿದೆ.

ಟೆಹ್ರಾನ್: ಸೇನಾ ಕಮಾಂಡರ್ ಹತ್ಯೆ ಬಳಿಕ ಅಮೆರಿಕ ಮತ್ತು ಇರಾನ್ ಸಂಘರ್ಷ ತಾರಕ್ಕೇರಿರುವಂತೆಯೇ ಇತ್ತ ಸಂಯಮ ಕಾಪಾಡಿಕೊಳ್ಳುವಂತೆ ಭಾರತ ಮಾಡಿರುವ ಮನವಿಗೆ ಸ್ಪಂದಿಸಿರುವ ಇರಾನ್, ಭಾರತದ ಸಂಧಾನ ಮಧ್ಯಸ್ಥಿಕೆಗೆ ಎಂದು ಹೇಳಿದೆ.

ಇರಾಕ್ ನಲ್ಲಿನ ಅಮೆರಿಕ ಸೇನಾ ಕ್ಯಾಂಪ್ ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ದೆಹಲಿಯಲ್ಲಿರುವ ಇರಾನ್ ರಾಯಭಾರಿ ಅಲಿ ಚೆಗೆನಿ ಅವರು ಮಾತನಾಡಿದ್ದು, ವಿಶ್ವದ ಶಾಂತಿ ಕಾಪಾಡುವ ಪ್ರಕ್ರಿಯೆಯಲ್ಲಿ ಭಾರತದ ಪಾತ್ರ ಪ್ರಮುಖವಾದದ್ದು. ಭಾರತ ಇರಾನ್ ದೇಶದ ಆಪ್ತ ರಾಷ್ಟ್ರಗಳಲ್ಲಿ ಒಂದು ಕೂಡ. ಒಂದು ವೇಳೆ ಭಾರತ ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿರುವ ಸಂಘರ್ಷವನ್ನು ನಿಯಂತ್ರಿಸಲು ಸಂಧಾನ ಮಧ್ಯಸ್ಥಿಕೆಗೆ ಮುಂದಾದರೆ ಅದಕ್ಕೆ ಸ್ವಾಗತವಿದೆ ಎಂದು ಹೇಳಿದ್ದಾರೆ.

ಇರಾನ್ ಸೇನಾ ಕಮಾಂಡರ್ ಸೊಲೈಮಾನಿ ಅವರ ಸಾವಿನ ಹಿನ್ನಲೆಯಲ್ಲಿ ನಡೆದ ಶೋಕಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಚೆಗನಿ, ಸಂಘರ್ಷವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಭಾರತ ಮಾತ್ರವಲ್ಲ ವಿಶ್ವದ ಯಾವುದೇ ರಾಷ್ಟ್ರ ಸಂಧಾನಕ್ಕೆ ಮುಂದಾದರೂ ಅದಕ್ಕೆ ನಮ್ಮ ಸ್ವಾಗತವಿದೆ. ನಮಗೆ ಯುದ್ಧ ಬೇಕಿಲ್ಲ, ಆದರೆ ನಮ್ಮ ಶಾಂತಿ, ಸೌಹಾರ್ಧತೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾದರೆ ಖಂಡಿತಾ ಸುಮ್ಮನಿರುವುದಿಲ್ಲ. ಅಮೆರಿಕ ದಾಳಿಗೆ ನಾವು ಪ್ರತಿ ದಾಳಿ ನಡೆಸಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com