ಗಣರಾಜ್ಯೋತ್ಸವ ದಿನ ಹಾರಾಡಲಿವೆ ಚಿನೂಕ್, ಅಪಾಚೆ ಹೆಲಿಕಾಪ್ಟರ್ ಗಳು

ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ಹೆಲಿಕಾಪ್ಟರ್ ಅಪಾಚೆ ಮತ್ತು ಸಾಗಾಟ ವಿಮಾನ ಚಿನೂಕ್ ಜನವರಿ 26ರಂದು ಗಣರಾಜ್ಯೋತ್ಸವದ ದಿನ ಮೊದಲ ಬಾರಿಗೆ ಹಾರಾಟ ನಡೆಸಲಿದೆ.
ಗಣರಾಜ್ಯೋತ್ಸವ ದಿನ ಹಾರಾಡಲಿವೆ ಚಿನೂಕ್, ಅಪಾಚೆ ಹೆಲಿಕಾಪ್ಟರ್ ಗಳು

ನವದೆಹಲಿ: ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ಹೆಲಿಕಾಪ್ಟರ್ ಅಪಾಚೆ ಮತ್ತು ಸಾಗಾಟ ವಿಮಾನ ಚಿನೂಕ್ ಜನವರಿ 26ರಂದು ಗಣರಾಜ್ಯೋತ್ಸವದ ದಿನ ಮೊದಲ ಬಾರಿಗೆ ಆಕಾಶದಲ್ಲಿ ಹಾರಾಟ ನಡೆಸಿ ತಮ್ಮ ಚಮತ್ಕಾರ ತೋರಿಸಲಿವೆ. 

ಚಿನೂಕ್ ನಡಿ ಹೊಸದಾಗಿ ಮೂರು ಸಾಗಾಟ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಿದ್ದು ಅವು ವಿಕ್ ಆಕಾರದಲ್ಲಿ ಹಾರಾಟ ನಡೆಸಲಿವೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಇನ್ನು ಈ ಬಾರಿ ಗಣರಾಜ್ಯೋತ್ಸವದಲ್ಲಿ ಐದು ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಬಾಣದ ಆಕಾರದಲ್ಲಿ ಹಾರಾಟ ನಡೆಸಿ ತಮ್ಮ ಚಮತ್ಕಾರ ತೋರಿಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com