ನವದೆಹಲಿ: ಒಂದು ಭೀಕರ ಘಟನೆಯಲ್ಲಿ, ತಮ್ಮ ನವಜಾತ ಶಿಶುವಿಗೆ ಪ್ಲಾಸ್ಮಾ ಸಾಗಿಸುತ್ತಿದ್ದ ಕುಟುಂಬದ ಮೂವರು ಅಪಘಾತದಲ್ಲಿ ಗಾಯಗೊಂಡ ಪರಿಣಾಮ ಸಮಯಕ್ಕೆ ಸರಿಯಾಗಿ ಪ್ಲಾಸ್ಮಾ ದೊರಕದೆ ಮಗು ದುರಂತ ಸಾವಿಗೀಡಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಪೋಷಕರು ಪ್ರಯಾಣಿಸುತ್ತಿದ್ದ ಕಾರು ವೇಗವಾಗಿ ಚಲಿಸುತ್ತಿದ್ದ ಇನ್ನೊಂದು ಕಾರಿಗೆ ಢಿಕ್ಕಿಯಾಗಿ ಅಪಘಾತವಾಗಿದೆ. ಆದರೆ ಇತ್ತ ಪ್ಲಾಸ್ಮಾ ಲಭ್ಯವಿಲ್ಲದ ಕಾರಣ ನವಜಾತ ಶಿಶು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.
ಜುಲೈ 11ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕು ಕಂಡಿದೆ,ಇದೇ ವೇಳೆ ವೇಗವಾಗಿ ಕಾರು ಚಲಾಯಿಸುತ್ತಿದ್ದ ಕಾರ್ ಚಾಲಕನನ್ನು ಬಂಧಿಸಿರುವುದಾಗಿ ದೆಹಲಿ ಪೋಲೀಸರು ಹೇಳಿಕೊಂಡಿದ್ದಾರೆ.
Advertisement