ಕೋವಿಡ್ 19: ಕಿರ್ಗಿಸ್ತಾನ್‌ದಲ್ಲಿ ಸಿಕ್ಕಿಬಿದ್ದ 1,500 ಭಾರತೀಯ ವಿದ್ಯಾರ್ಥಿಗಳ ಏರ್ ಲಿಫ್ಟ್ಗೆಮುಂದಾದ ಸೋನು ಸೂದ್, ಸ್ಪೈಸ್ ಜೆಟ್

ನಟ ಸೋನು ಸೂದ್ ಅವರ ಸಹಯೋಗದೊಂದಿಗೆ, ಕಡಿಮೆ ವೆಚ್ಚದ ವಿಮಾನಯಾನ ಸಂಸ್ಧೆ ಸ್ಪೈಸ್ ಜೆಟ್ COVID-19 ಸಾಂಕ್ರಾಮಿಕ ರೋಗದಿಂದಾಗಿ ಕಿರ್ಗಿಸ್ತಾನ್‌ನಲ್ಲಿ ಸಿಲುಕಿರುವ 1,500 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆತರುತ್ತಿದೆ ಎಂದು ವಿಮಾನಯಾನ ಸಂಸ್ಥೆ ಗುರುವಾರ ಪ್ರಕಟಿಸಿದೆ.
ಸೋನು ಸೂದ್
ಸೋನು ಸೂದ್
Updated on

ನವದೆಹಲಿ: ನಟ ಸೋನು ಸೂದ್ ಅವರ ಸಹಯೋಗದೊಂದಿಗೆ, ಕಡಿಮೆ ವೆಚ್ಚದ ವಿಮಾನಯಾನ ಸಂಸ್ಧೆ ಸ್ಪೈಸ್ ಜೆಟ್ COVID-19 ಸಾಂಕ್ರಾಮಿಕ ರೋಗದಿಂದಾಗಿ ಕಿರ್ಗಿಸ್ತಾನ್‌ನಲ್ಲಿ ಸಿಲುಕಿರುವ 1,500 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆತರುತ್ತಿದೆ ಎಂದು ವಿಮಾನಯಾನ ಸಂಸ್ಥೆ ಗುರುವಾರ ಪ್ರಕಟಿಸಿದೆ.

ಇದಕ್ಕಾಗಿ ಕಿರ್ಗಿಸ್ತಾನ್‌ನಲ್ಲಿ ಒಂಬತ್ತು ಚಾರ್ಟರ್ ವಿಮಾನಗಳನ್ನು ನಿಯೋಜಿಸಲಾಗಿದೆ ವಿಮಾನಯಾನ ಸಂಸ್ಥೆ ತಿಳಿಸಿದೆ. ಕಿರ್ಗಿಸ್ತಾನ್ ರಾಜಧಾನಿ ಬಿಶ್‌ಕೆಕ್‌ನಿಂದ ವಾರಣಾಸಿಗೆ 135 ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಮೊದಲ ವಿಮಾನ ಗುರುವಾರ ಹೊರಟಿತು. ವಿಮಾನಯಾನವು ಮುಂದಿನ ದಿನಗಳಲ್ಲಿ ಬಿಶ್‌ಕೆಕ್‌ನಿಂದ ಭಾರತದ ವಿವಿಧ ನಗರಗಳಿಗೆ ಹೆಚ್ಚಿನ ಚಾರ್ಟರ್ ವಿಮಾನಗಳು ತೆರಳಲಿವೆ ಎಂದರು.

ಎರಡು ತಿಂಗಳುಗಳಿಂದ ಕಿರ್ಗಿಸ್ತಾನ್‌ನಲ್ಲಿ ಸಿಲುಕಿರುವ 1,500 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಒಂಬತ್ತು ಚಾರ್ಟರ್ ಫ್ಲೈಟ್‌ಗಳು ಕಾರ್ಯ ನಿರ್ವಹಿಸಲಿದೆ. ಈ ವಿಶೇಷ ವಾಪಸಾತಿ ಕಾರ್ಯಾಚರಣೆಯನ್ನು ಬಾಲಿವುಡ್ ನಟ ಸೋನು ಸೂದ್ ಅವರ ಸಹಯೋಗದೊಂದಿಗೆ ಸ್ಪೈಸ್‌ಜೆಟ್ ಕೈಗೆತ್ತಿಕೊಂಡಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com