ತೆಲಂಗಾಣ: ಕೊರೋನಾಗೆ 33 ವರ್ಷದ ಪತ್ರಕರ್ತ ಬಲಿ

ಡೆಡ್ಲಿ ಕೊರೊನಾ ವೈರಸ್ ಗೆ ಪತ್ರಕರ್ತರೊಬ್ಬರು ಬಲಿಯಾಗಿದ್ದಾರೆ. ತೆಲುಗು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ 33 ವರ್ಷದ ಪತ್ರಕರ್ತರೊಬ್ಬರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹೈದರಾಬಾದ್:  ಡೆಡ್ಲಿ ಕೊರೊನಾ ವೈರಸ್ ಗೆ ಪತ್ರಕರ್ತರೊಬ್ಬರು ಬಲಿಯಾಗಿದ್ದಾರೆ. ತೆಲುಗು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ 33 ವರ್ಷದ ಪತ್ರಕರ್ತರೊಬ್ಬರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕು ತಗುಲಿದ ಬಳಿಕ ಗಾಂಧಿ ಆಸ್ಪತ್ರೆಗೆ ಜೂನ್ 4 ರಂದು ಪತ್ರಕರ್ತ ದಾಖಲಾಗಿದ್ದರು. ಬೈಲ್ಯಾಟರಲ್ ನ್ಯುಮೋನಿಯಾ ಜೊತೆಗೆ ಟೈಪ್-1 ರೆಸ್ಪಿರೇಟರಿ ಫೇಲ್ಯೂರ್ ಮತ್ತು ಅಕ್ಯೂಟ್ ರೆಸ್ಪಿರೇಟರಿ ಡಿಸೀಸ್ ಸಿಂಡ್ರೋಮ್ ನಿಂದ ಪತ್ರಕರ್ತ ಬಳಲುತ್ತಿದ್ದರು.

''ಪತ್ರಕರ್ತ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಬೆಳಗ್ಗೆ 9.37 ರ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದರು'' ಎಂದು ಗಾಂಧಿ ಆಸ್ಪತ್ರೆಯ ವೈದ್ಯ ಡಾ.ಎಂ.ರಾಜಾ ರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com