

ತಿರುವನಂತಪುರ: ಕೇರಳದಲ್ಲಿ ಮೂರು ಹೊಸ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿದೆ. ಪ್ರಸ್ತುತ ಕೇರಳದಲ್ಲಿ ಒಟ್ಟಾರೇ 24 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟಾರೇ ಈ ಸೋಂಕು ತಗುಲಿದವರ ಸಂಖ್ಯೆ 117ಕ್ಕೆ ಏರಿಕೆ ಆಗಿದೆ.
ಜಾಗತಿಕವಾಗಿ 1.5 ಲಕ್ಷ ಜನರು ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದು, ಈ ಸೋಂಕು ತಡೆಗಾಗಿ ಅನೇಕ ರಾಜ್ಯಗಳು ಮುಂದಾಗಿರುವುದರಿಂದ ದೇಶಾದ್ಯಂತ ಆಘೋಷಿತ ಬಂದ್ ವಾತವಾರಣದಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ.
ಈ ಸೋಂಕು ರಾಷ್ಟ್ರದಲ್ಲಿ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿಯೂ ಹೆಚ್ಚಿನ ಸಂಖ್ಯೆಯ ಜನರು ಈ ಸೋಂಕಿಗೆ ಒಳಗಾಗಿದ್ದು, ಜನರ ರಕ್ಷಣೆ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಿವೆ.