ಮಹಾಭಾರತ ಯುದ್ಧ ಗೆಲ್ಲಲು 18 ದಿನ, ಕೊರೋನಾ ಗೆಲ್ಲಲು 21 ದಿನ: ಪ್ರಧಾನಿ ಮೋದಿ

ಮಹಾಮಾರಿ ಕೊರೋನಾ ವೈರಸ್ ದೇಶವನ್ನು ಬೆಂಬಿಡದಂತೆ ಕಾಡುತ್ತಿದ್ದು ಇದರ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶವನ್ನೇ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದರು.
ಮೋದಿ
ಮೋದಿ
Updated on

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ದೇಶವನ್ನು ಬೆಂಬಿಡದಂತೆ ಕಾಡುತ್ತಿದ್ದು ಇದರ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶವನ್ನೇ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದರು. 

ಇದೀಗ ತಮ್ಮ ಕ್ಷೇತ್ರ ವಾರಣಾಸಿ ಜನರೊಂದಿಗೆ ಸಂವಾದ ನಡೆಸಿದ ಅವರು ಮಹಾಭಾರತ ಯುದ್ಧ ಗೆಲ್ಲಲು 18 ದಿನ ಬೇಕಾಯಿತು. ಆದರೆ ಕೊರೋನಾ ವೈರಸ್ ವಿರುದ್ಧ ಗೆಲ್ಲಲು 21 ದಿನಗಳ ಅವಶ್ಯಕತೆ ಇದೆ ಎಂದರು.

ಲಾಕ್ ಡೌನ್ ನಡುವೆಯೂ ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು 70 ಹೊಸ ಪ್ರಕರಣಗಳು ಪತ್ತೆಯಾಗಿವೆ ಇದರೊಂದಿಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಇಲ್ಲಿಯವರೆಗೂ 10 ಮಂದಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com