ಗ್ರೀನ್ ಝೋನ್ ಎಂದು ಘೋಷಿಸಲ್ಪಟ್ಟಿದ್ದ ಗೋವಾ ರಾಜ್ಯದಲ್ಲಿ 7 ಹೊಸ ಕೊರೋನಾ ಸೋಂಕು ಪ್ರಕರಣ!

ಗೋವಾ ರಾಜ್ಯದಲ್ಲಿ 7 ಮಂದಿ ಕೊರೋನಾ ಶಂಕಿತರ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
Updated on: 

ಪಣಜಿ: ಗೋವಾ ರಾಜ್ಯದಲ್ಲಿ 7 ಮಂದಿ ಕೊರೋನಾ ಶಂಕಿತರ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.

ಮೇ 1ರಿಂದ ಯಾವುದೇ ಹೊಸ ಕೊರೋನಾ ಪ್ರಕರಣಗಳು ವರದಿಯಾಗದ್ದರಿಂದ ಗೋವಾ ರಾಜ್ಯವನ್ನು ಈ ಹಿಂದೆ ಕೇಂದ್ರ ಸರ್ಕಾರ ಹಸಿರು ವಲಯ ಎಂದು ಗುರುತಿಸಿತ್ತು. ಆದರೆ ಗೋವಾ ಮೆಡಿಕಲ್ ಕಾಲೇಜಿನಲ್ಲಿ 7 ಮಂದಿ ಶಂಕಿತರ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ರಾಣೆ ತಿಳಿಸಿದ್ದಾರೆ.

ಕೋವಿಡ್-19 ಚಿಕಿತ್ಸೆಗೆ ಮೀಸಲಾಗಿರುವ ಆಸ್ಪತ್ರೆಯಲ್ಲಿ ಇದೀಗ ಮೂವರು ಮಹಿಳೆಯರು ಸೇರಿದಂತೆ 7 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ ಐವರು ಸದಸ್ಯರ ಕಾರು ಚಾಲಕ ಮುಂಬೈಗೆ ಹೋಗಿ ಬಂದಿದ್ದು ಅಲ್ಲಿಂದ ಸೋಂಕು ಬಂದಿರಬಹುದು ಎಂದು ಹೇಳಲಾಗುತ್ತಿದೆ. ಈ ಐದು ಮಂದಿಯಲ್ಲಿ ಒಂದು ವರ್ಷದ ಮಗು ಕೂಡ ಸೇರಿದೆ.


7ನೇ ವ್ಯಕ್ತಿ ಟ್ರಕ್ ಚಾಲಕನಾಗಿದ್ದು ಈತ ಗುಜರಾತ್ ನಿಂದ ಸಾಮಾನು ತಂದಿದ್ದ. ಅಲ್ಲಿಂದ ಸೋಂಕು ಒಕ್ಕರಿಸಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಗ್ರೀನ್ ವಲಯ ಎಂದು ಘೋಷಿಸಿದ್ದರಿಂದ ಗೋವಾ ರಾಜ್ಯದಲ್ಲಿ ಈ ತಿಂಗಳ ಆರಂಭದಿಂದ ಬಹುತೇಕ ಚಟುವಟಿಕೆಗಳು ಆರಂಭವಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com