ಶತ್ರುಗಳೇ ಎಚ್ಚರ!: ಜುಲೈ ತಿಂಗಳಾಂತ್ಯಕ್ಕೆ ಬರಲಿದೆ 4 ರಾಫೆಲ್ ಫೈಟರ್ ಜೆಟ್  

ಭಾರತ ಖರೀದಿಸಿರುವ 36 ರಾಫೆಲ್ ಫೈಟರ್ ಜೆಟ್ ಗಳ ಪೈಕಿ 4 ರಾಫೆಲ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿವೆ. 
ರಾಫೆಲ್ ಜೆಟ್
ರಾಫೆಲ್ ಜೆಟ್
Updated on

ನವದೆಹಲಿ: ಭಾರತ ಖರೀದಿಸಿರುವ 36 ರಾಫೆಲ್ ಫೈಟರ್ ಜೆಟ್ ಗಳ ಪೈಕಿ 4 ರಾಫೆಲ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿವೆ. 

ಕೊರೋನಾ ಭೀತಿಯ ನಡುವೆಯೂ ಇದು ಭಾರತದ ಮಟ್ಟಿಗೆ ಸಂತಸದ ಸುದ್ದಿಯಾಗಿದೆ. ಕೋವಿಡ್-19 ರ ಕಾರಣದಿಂದಾಗಿಯೇ ರಾಫೆಲ್ ಗಳ ಆಗಮನ 11 ವಾರ ವಿಳಂಬವಾಗಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಬರಬೇಕಿದ್ದ ರಾಫೆಲ್ ಜೆಟ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತ ತಲುಪುತ್ತಿವೆ.

58,000 ಕೋಟಿ ರೂಪಾಯಿ ಮೊತ್ತದ 36 ರಾಫೆಲ್ ಜೆಟ್ ಗಳ ಖರೀದಿಗೆ 2016 ರಲ್ಲಿ ಭಾರತ ಸರ್ಕಾರ ಫ್ರಾನ್ಸ್ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com