ಮಹಾರಾಷ್ಟ್ರ,ಪಂಜಾಬ್ ನಂತರ ತಮಿಳುನಾಡಿನಲ್ಲೂ ಮೇ 31ರವರೆಗೂ ಲಾಕ್ ಡೌನ್ ವಿಸ್ತರಣೆ

ಮೇ 31ರವರೆಗೂ ಕೋವಿಡ್- 19 ಲಾಕ್ ಡೌನ್ ನ್ನು ತಮಿಳುನಾಡು ಸರ್ಕಾರ ವಿಸ್ತರಿಸಿದೆ.ಇದಕ್ಕೂ ಮುನ್ನ ಮಹಾರಾಷ್ಟ್ರ ಹಾಗೂ ಪಂಜಾಬ್ ಸರ್ಕಾರಗಳು ಕೂಡಾ ತಮ್ಮ ರಾಜ್ಯಗಳಲ್ಲಿ ಈ ಮಾಸಾಂತ್ಯದವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ  ಹೊರಡಿಸಿದ್ದವು.
ಲಾಕ್ ಡೌನ್ ಚಿತ್ರ
ಲಾಕ್ ಡೌನ್ ಚಿತ್ರ
Updated on: 

ಚೆನ್ನೈ: ಮೇ 31ರವರೆಗೂ ಕೋವಿಡ್- 19 ಲಾಕ್ ಡೌನ್ ನ್ನು ತಮಿಳುನಾಡು ಸರ್ಕಾರ ವಿಸ್ತರಿಸಿದೆ.ಇದಕ್ಕೂ ಮುನ್ನ ಮಹಾರಾಷ್ಟ್ರ ಹಾಗೂ ಪಂಜಾಬ್ ಸರ್ಕಾರಗಳು ಕೂಡಾ ತಮ್ಮ ರಾಜ್ಯಗಳಲ್ಲಿ ಈ ಮಾಸಾಂತ್ಯದವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ  ಹೊರಡಿಸಿದ್ದವು.

ತಮಿಳುನಾಡಿನಲ್ಲಿ 10 ಸಾವಿರ ಕೋವಿಡ್-19 ಕೇಸ್ ಗಳು ವರದಿಯಾಗಿದ್ದು, 74 ಮಂದಿ ಮೃತಪಟ್ಟಿದ್ದಾರೆ. ಮೇ ಮಾಸಾಂತ್ಯದವರೆಗೂ ಶಾಲಾ, ಕಾಲೇಜುಗಳು, ಪೂಜಾ ಸ್ಥಳಗಳು, ಚಿತ್ರಮಂದಿರಗಳು ಮತ್ತು ಬಾರ್ ಗಳು ಬಂದ್ ಆಗಿರುತ್ತವೆ.

ಆದಾಗ್ಯೂ, ಕೊಯಂಬತ್ತೂರು, ಸೆಲಂ, ತ್ರಿಚಿ ಮತ್ತು ನೀಲಗಿರಿ ಸೇರಿದಂತೆ 25 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಇ- ಪಾಸ್ ಇಲ್ಲದೆ ಅತ್ಯವಶ್ಯಕ ಸೇವೆ ನೀಡುವ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com