ಕೀಪ್ ಇಟ್ ಅಪ್ ಚಾಲೆಂಜ್ ಪ್ರಾರಂಭಿಸಿದ ಯುವಿ, ಅದಕ್ಕೆ ಹೊಸ ಆಯಾಮ ನೀಡಿದ ಮಾಸ್ಟರ್ ಬ್ಲಾಸ್ಟರ್

ಕೊರೋನಾ ವೈರಸ್, ಲಾಕ್ ಡೌನ್ ಪರಿಣಾಮವಾಗಿ ಬಹುತೇಕ ಎಲ್ಲಾ ಕ್ರೀಡಾ ಚಟುವಟಿಕೆಗಳೂ ಸ್ತಬ್ಧಗೊಂಡಿದ್ದು, ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಸಾಮಾಜಿಕ ಜಾಲತಾಣದಲ್ಲಿ ಕೀಪ್ ಇಟ್ ಅಪ್ ಎಂಬ ಹೊಸ ಚಾಲೆಂಜ್ ನ್ನು ಪ್ರಾರಂಭಿಸಿದ್ದಾರೆ. 
ಕೀಪ್ ಇಟ್ ಅಪ್ ಚಾಲೆಂಜ್ ಪ್ರಾರಂಭಿಸಿದ ಯುವಿ, ಅದಕ್ಕೆ ಹೊಸ ಆಯಾಮ ನೀಡಿದ ಮಾಸ್ಟರ್ ಬ್ಲಾಸ್ಟರ್
Updated on

ಕೊರೋನಾ ವೈರಸ್, ಲಾಕ್ ಡೌನ್ ಪರಿಣಾಮವಾಗಿ ಬಹುತೇಕ ಎಲ್ಲಾ ಕ್ರೀಡಾ ಚಟುವಟಿಕೆಗಳೂ ಸ್ತಬ್ಧಗೊಂಡಿದ್ದು, ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಸಾಮಾಜಿಕ ಜಾಲತಾಣದಲ್ಲಿ ಕೀಪ್ ಇಟ್ ಅಪ್ ಎಂಬ ಹೊಸ ಚಾಲೆಂಜ್ ನ್ನು ಪ್ರಾರಂಭಿಸಿದ್ದಾರೆ. 

ತಮ್ಮ ಅಧಿಕೃತ ಟ್ವೀಟ್ ಖಾತೆಯಲ್ಲಿ ಯುವರಾಜ್ ಸಿಂಗ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ತಮ್ಮ ಚಾಲೆಂಜ್ ನ್ನು ಮುಂದಿನ ಹಂತಕ್ಕೆ ತಲುಪಿಸಿರುವ ಯುವರಾಜ್ ಸಿಂಗ್, ಅದರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಚಾಲೆಂಜ್ ಸ್ವೀಕರಿಸುವಂತೆ ಟ್ಯಾಗ್ ಮಾಡಿದ್ದಾರೆ. 

ಯುವಿ ನೀಡಿರುವ ಚಾಲೆಂಜ್ ನ್ನು ಹರ್ಭಜನ್ ಸಿಂಗ್ ಸ್ವೀಕರಿಸಿದ್ದರೆ, ಸಚಿನ್ ತೆಂಡೂಲ್ಕರ್ ಚಾಲೆಂಜ್ ನ್ನು ಸ್ವೀಕರಿಸಿದ್ದು ಅದಕ್ಕೆ ಹೊಸ ಆಯಾಮವನ್ನೇ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com