ಕೊರೋನಾ ಸೋಂಕು: ಕೇರಳದಲ್ಲಿ ಇಂದು 5792 ಹೊಸ ಸೋಂಕು ಪ್ರಕರಣಗಳು ದಾಖಲು!

ಮಾರಕ ಕೊರೋನಾ ಸೋಂಕಿನ ಹಾವಳಿ ಕೇರಳದಲ್ಲಿ ಮುಂದುವರೆದಿದ್ದು, ಇಂದು ಮತ್ತೆ 5792 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
ಕೊರೋನಾ ಪರೀಕ್ಷೆ
ಕೊರೋನಾ ಪರೀಕ್ಷೆ

ಕೊಚ್ಚಿ: ಮಾರಕ ಕೊರೋನಾ ಸೋಂಕಿನ ಹಾವಳಿ ಕೇರಳದಲ್ಲಿ ಮುಂದುವರೆದಿದ್ದು, ಇಂದು ಮತ್ತೆ 5792 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

ಈ ಕುರಿತಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಾಹಿತಿ ನೀಡಿದ್ದು, ಕೇರಳದಲ್ಲಿ ಇಂದು ಒಂದೇ ದಿನ 5792 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಆ ಮೂಲಕ ಕೇರಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 5,33, 500ಕ್ಕೇರಿದೆ. ಅಂತೆಯೇ ಇಂದು 6620 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,61,394ಕ್ಕೆ ಏರಿಕೆಯಾಗಿದೆ.

ಇಂದು 27 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೇರಳದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 1915ಕ್ಕೇರಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com