ಕೊರೋನಾ ಸಾಂಕ್ರಾಮಿಕದ ಸವಾಲಿನ ನಡುವೆಯೇ ಕುಂಭ ಮೇಳ ಆಯೋಜನೆ: ಉತ್ತರಾಖಂಡ ಸಿಎಂ

ಕೋವಿಡ್‌-19 ಸಾಂಕ್ರಾಮಿಕದ ಸವಾಲಿನ ನಡುವೆಯೇ 2021ರಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹೇಳಿದ್ದಾರೆ. 
ಕುಂಭಮೇಳ (ಸಂಗ್ರಹ ಚಿತ್ರ)
ಕುಂಭಮೇಳ (ಸಂಗ್ರಹ ಚಿತ್ರ)
Updated on: 

ಡೆಹರಾಡೂನ್: ಕೋವಿಡ್‌-19 ಸಾಂಕ್ರಾಮಿಕದ ಸವಾಲಿನ ನಡುವೆಯೇ 2021ರಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹೇಳಿದ್ದಾರೆ. 

2021ರ ಜನವರಿ 14ರಿಂದ ಕುಂಭಮೇಳ ಆರಂಭವಾಗಲಿದ್ದು, ಅದರ ಸಿದ್ಧತೆಗೆ ಸಂಬಂಧಿಸಿದಂತೆ ಅಖಿಲ ಭಾರತೀಯ ಅಖಾಡಾ ಪರಿಷತ್ (ಎಬಿಎಪಿ) ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ರಾವತ್‌ ಅವರು ಭಾನುವಾರ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, ಕೋವಿಡ್‌-19  ಸಾಂಕ್ರಾಮಿಕದ ಸವಾಲಿನ ನಡುವೆಯೇ 2021ರಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದೆ ಎಂದು ಹೇಳಿದರು.

'ಸರ್ಕಾರದ ಇಲಾಖೆಗಳ ಕಾರ್ಯದರ್ಶಿಗಳು ಕುಂಭಮೇಳದ ಸಿದ್ಧತೆಯ ಕಾರ್ಯಗಳ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಸಹ 15 ದಿನಗಳಲ್ಲಿ ಪರಿಸ್ಥಿತಿಯ ಪರಿಶೀಲನೆ ಕೈಗೊಳ್ಳಲಿದ್ದಾರೆ. ಕೋವಿಡ್‌-19 ಪರಿಸ್ಥಿತಿಯನ್ನು ಆಧರಿಸಿ ಕುಂಭಮೇಳದ ವಿಸ್ತಾರ ನಿರ್ಧರಿಸಲಾಗುತ್ತದೆ. ಇದೇ  ವೇಳೆ ಎಬಿಎಪಿ ಹಾಗೂ ಧಾರ್ಮಿಕ ಸಂಘಟನೆಗಳ ಸಲಹೆಗಳನ್ನು ಪರಿಗಣಿಸಲಾಗುತ್ತದೆ, ಜನರಿಗೆ ಯಾವುದೇ ತೊಡಕಾಗದಂತೆ ಗಮನಿಸಲಾಗುತ್ತದೆ. ಸುರಕ್ಷಿತ ಕುಂಭಮೇಳೆ ನಡೆಸಲಾಗುತ್ತದೆ' ಎಂದು ಸಿಎಂ ರಾವತ್‌ ಹೇಳಿದ್ದಾರೆ.

ಇನ್ನು ಈ ಬಾರಿಯ ಕುಂಭಮೇಳದಲ್ಲಿ ನಿತ್ಯ 35ರಿಂದ 50 ಲಕ್ಷ ಜನರು ಗಂಗಾ ನದಿಯಲ್ಲಿ ಪವಿತ್ರಸ್ನಾನ ಮಾಡುವ ನಿರೀಕ್ಷೆ ಇದ್ದು, ಕುಂಭಮೇಳಕ್ಕಾಗಿಯೇ ನಿರ್ಮಿಸಲಾಗುತ್ತಿರುವ ಒಂಬತ್ತು ಹೊಸ ಘಾಟ್‌ಗಳು (ನದಿ ತೀರಗಳು), ಎಂಟು ಸೇತುವೆಗಳು ಹಾಗೂ ರಸ್ತೆಗಳ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ.  ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಕುಡಿಯುವ ನೀರಿನ ಸೌಲಭ್ಯ, ವಾಹನ ನಿಲುಗಡೆ ಹಾಗೂ ಅತಿಕ್ರಮ ಪ್ರವೇಶವನ್ನು ತಡೆಯುವ ಕಾರ್ಯಗಳು ನಡೆದಿವೆ. ಬಹುತೇಕ ಕಾಮಗಾರಿಗಳು ಡಿಸೆಂಬರ್‌ 15ಕ್ಕೆ ಪೂರ್ಣಗೊಳ್ಳಲಿವೆ' ಎಂದು ಕುಂಭಮೇಳದ ಅಧಿಕಾರಿ ದೀಪಕ್‌ ರಾವತ್‌ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com