ಸಾಧ್ವಿ ಗ್ಯಾಂಗ್ ರೇಪ್ ಪ್ರಕರಣ: 12 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಿದ ಪೊಲೀಸರು

38 ವರ್ಷದ ಸಾಧ್ವಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ರಾಂಚಿ: 38 ವರ್ಷದ ಸಾಧ್ವಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. 

ಜಾರ್ಖಂಡ್ ನ ಗೊಡ್ಡಾ ಜಿಲ್ಲೆಯಲ್ಲಿನ ಆಶ್ರಮವೊಂದಕ್ಕೆ ಕಳೆದ ಮಂಗಳವಾರ ತಡ ರಾತ್ರಿ ನುಗ್ಗಿದ ನಾಲ್ವರು ಕಾಮುಕರು 38 ವರ್ಷದ ಸಾಧ್ವಿಗೆ ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು.

ಆಶ್ರಮದಲ್ಲಿದ್ದ ಸಾಧುಗಳನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಬೀಗ ಜಡಿದಿದ್ದರು. ಇನ್ನು ಸಾಧ್ವಿ ಮೇಲಿನ ಅತ್ಯಾಚಾರವನ್ನು ತಡೆಯಲು ಬಂದ ಸಾಧುವೊಬ್ಬರನ್ನು ಆರೋಪಿಗಳು ಥಳಿಸಿದ್ದರು. ಗ್ಯಾಂಗ್ ರೇಪ್ ಸಂಬಂಧ ಸಾಧ್ವಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿ ತನಖೆ ಕೈಗೊಂಡಿದ್ದರು. ಈ ಸಂಬಂಧ ಪೊಲೀಸರು ದೀಪಕ್ ರಾಣಾ ಮತ್ತು ಆಶೀಶ್ ರಾಣಾನನ್ನು ಬಂಧಿಸಿದ್ದರು. 

ಪ್ರಕರಣ ಸಂಬಂಧ ಪೊಲೀಸರು ಬಂಧಿಸಿರುವ ಮೂರನೇ ಆರೋಪಿ 12 ವರ್ಷದ ಬಾಲಕನಾಗಿದ್ದು ನಾಲ್ಕನೇ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದೇವೆ ಎಂದು ಪೊಲೀಸ್ ಅಧೀಕ್ಷಕ ವೈಎಸ್ ರಮೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com