ಫ್ರೀ ಉಮರ್ ಖಲೀದ್: ಜೆಎನ್ಯು ಮಾಜಿ ವಿದ್ಯಾರ್ಥಿ ಮುಖಂಡನ ಬಂಧನ ವಿರೋಧಿಸಿ ಸ್ವರಾ ಭಾಸ್ಕರ್ ಟ್ವೀಟ್!

ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯಡಿ ಜವಾಹರ್ ಲಾಲ್ ನೆಹರೂ ಯುನಿವರ್ಸಿಟಿ ಹಳೆಯ ವಿದ್ಯಾರ್ಥಿ ಉಮರ್ ಖಲೀದ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸ್ವರಾ ಭಾಸ್ಕರ್
ಸ್ವರಾ ಭಾಸ್ಕರ್

ಮುಂಬೈ: ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯಡಿ ಜವಾಹರ್ ಲಾಲ್ ನೆಹರೂ ಯುನಿವರ್ಸಿಟಿ ಹಳೆಯ ವಿದ್ಯಾರ್ಥಿ ಉಮರ್ ಖಲೀದ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ನಟಿ ಸ್ವರಾ ಭಾಸ್ಕರ್ ಫ್ರೀ ಉಮರ್ ಖಲೀದ್ ಎಂದು ಟ್ವೀಟ್ ಮಾಡಿ ಆತನನ್ನು ಬೆಂಬಲಿಸಿದ್ದಾರೆ. 

ಈಶಾನ್ಯ ದೆಹಲಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಉಮರ್ ಖಲೀದ್ ಭಾಗಿಯಾಗಿದ್ದ ಮತ್ತು ಪ್ರಚೋದನೆ ನೀಡಿದ್ದ ಎಂಬ ಆರೋಪ ಸಂಬಂಧ ದೆಹಲಿ ಪೊಲೀಸರ ವಿಶೇಷ ತಂಡ ಭಾನುವಾರ ರಾತ್ರಿ ಬಂಧಿಸಿತ್ತು. 

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸ್ವರಾ ಭಾಸ್ಕರ್ #ಫ್ರೀ ಉಮರ್ ಖಲೀದ್ #ಸ್ಕ್ರಾಪ್ ಯುಎಪಿಎ ಎಂದು ಹ್ಯಾಶ್ ಟ್ಯಾಗ್ ನೀಡಿ ಟ್ವೀಟ್ ಮಾಡಿದ್ದಾರೆ. 

ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಸಂಬಂಧ ನಟಿ ರಿಯಾ ಚಕ್ರವರ್ತಿ ಬಂಧನವನ್ನು ವಿರೋಧಿಸಿ ಸ್ವರಾ ಭಾಸ್ಕರ್ ಈ ಹಿಂದೆ ಟ್ವೀಟ್ ಮಾಡಿ ವಿರೋಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com