

ಜೈಪುರ: ತನ್ನ ಪ್ರೇಯಸಿ ಇನ್ನೊಬ್ಬ ಯುವಕನ ಜೊತೆ ಇದ್ದ ವಿಚಾರ ತಿಳಿದು ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಚೂರಿ ಇರಿದು, ನಂತರ ಗನ್ ಪಾಯಿಂಟ್ ನಲ್ಲಿ ಗುಂಡಿಕ್ಕಿದ್ದಾನೆ. ವಿಡಿಯೋ ಭಯಾನಕವಾಗಿದೆ.
ರಾಜಸ್ತಾನದ ಜೈಪುರದಲ್ಲಿ ಈ ಘಟನೆ ನಡೆದಿದೆ. ಯುವತಿ ಪರೀಕ್ಷೆ ಮುಗಿಸಿ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಯುವಕರಿಬ್ಬರು ಯುವತಿಯನ್ನು ಮಧ್ಯದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಬೈಕ್ ನಲ್ಲಿ ಯುವಕ ಮಧ್ಯೆ ಕುಳಿತಿರುವ ಯುವತಿ ಪ್ರಜ್ಞಾಹೀನಳಾಗಿರುವುದು ಕಾಣಬಹುದು. ಇನ್ನು ಯುವಕ ಮೊದಲಿಗೆ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಗನ್ ಪಾಯಿಂಟ್ ನಲ್ಲಿ ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ.
ಚೂರಿ ಇರಿತ ಮತ್ತು ಗುಂಡೇಟಿನಿಂದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತನ್ನ ಗೆಳತಿ ಬೇರೆ ಯುವಕನ ಜೊತೆ ಇದ್ದಿದ್ದನ್ನು ನೋಡಿ ಅಸೂಯೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.