ದೆಹಲಿ ಗಲಭೆ ನಿಯಂತ್ರಿಸಲು ವಿಫಲರಾದವರು ರಾಜೀನಾಮೆ ನೀಡಬೇಕು: ರಜನಿಕಾಂತ್ ಆಗ್ರಹ

ಈಶಾನ್ಯ ದೆಹಲಿ ಪ್ರದೇಶದಲ್ಲಿ ಭುಗಿಲೆದ್ದ ಗಲಭೆಗಳ ಬಗ್ಗೆ ತಮಿಳು ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ. 
ಮುಸ್ಲಿಮ್ ಧರ್ಮಗುರುಗಳೊಂದಿಗೆ ರಜಿನಿಕಾಂತ್
ಮುಸ್ಲಿಮ್ ಧರ್ಮಗುರುಗಳೊಂದಿಗೆ ರಜಿನಿಕಾಂತ್

ಚೆನ್ನೈ: ಈಶಾನ್ಯ ದೆಹಲಿ ಪ್ರದೇಶದಲ್ಲಿ ಭುಗಿಲೆದ್ದ ಗಲಭೆಗಳ ಬಗ್ಗೆ ತಮಿಳು ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ. 

ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನುವ್ಯಕ್ತಪಡಿಸಿರುವ ಅವರು, ದೆಹಲಿ ಗಲಭೆಯನ್ನು ತೀವ್ರವಾಗಿ ಖಂಡಿಸಿ, ಈ ಗಲಭೆಗಳನ್ನುನಿಯಂತ್ರಿಸುವಲ್ಲಿ ವಿಫಲರಾದವರು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು  ಒತ್ತಾಯಿಸಿದ್ದಾರೆ.  ದೇಶದಲ್ಲಿ ಶಾಂತಿ ಸ್ಥಾಪಿಸಲು ಏನು ಬೇಕಾದರೂ ಮಾಡಲು ತಾವು ಸಿದ್ಧ ಎಂದು ಹೇಳಿದ್ದಾರೆ. ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ  ನೆಲೆಸುವಂತೆ ಮಾಡುವುದು ತಮ್ಮ ಮೊದಲ ಆದ್ಯತೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಚೆನ್ನೈ ನಲ್ಲಿರುವ ರಜನಿ ಕಾಂತ್ ನಿವಾಸಲ್ಲಿ, ತಮಿಳುನಾಡು ಜಮಾತ್ ಉಮಾ ಸಭೈ ಸದಸ್ಯರು ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮಾತ್ರವಲ್ಲದೆ, ಎನ್‌ಆರ್‌ಸಿ ಮತ್ತು ಎನ್‌ಆರ್‌ಪಿ ಕುರಿತು ಚರ್ಚೆ ನಡೆಸಿದ್ದರು. ಸಿಎಎ ಕಾಯ್ದೆಯಿಂದ  ಯಾವುದೇ ಮುಸ್ಲಿಮ್ ವ್ಯಕ್ತಿಗೆ ತೊಂದರೆ ಎದುರಾದರೆ ಕಾಯ್ದೆಯ ವಿರುದ್ದ ಮೊದಲು ಹೋರಾಟ ನಡೆಸುವುದು ನಾನೇ ಎಂದು ರಜನಿಕಾತ್ ಈ ಹಿಂದೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com