ನನ್ನ ಅಂಗಾಂಗ ದಾನ ಮಾಡಿ: ಗಲ್ಲಿಗೇರಿದ ನಿರ್ಭಯಾ ಹತ್ಯಾಚಾರಿಯ ಆಸೆ!

ಸತತ 8 ವರ್ಷಗಳ ಬಳಿಕ ನಿರ್ಭಯಾ ಹತ್ಯಾಚಾರಿಗಳನ್ನು ಇಂದು ಮುಂಜಾನೆ ಗಲ್ಲಿಗೇರಿಸಲಾಗಿದ್ದು, ಪ್ರಕರಣ ಅಪರಾಧಿಗಳಲ್ಲಿ ಒಬ್ಬ ತನ್ನ ಮರಣಾನಂತರ ತನ್ನ ದೇಹದ ಅಂಗಗಳನ್ನು ದಾನ ಮಾಡುವಂತೆ ಅಧಿಕಾರಿಗಳಲ್ಲಿ ತನ್ನ ಆಸೆ ಹೇಳಿಕೊಂಡಿದ್ದನಂತೆ.

Published: 20th March 2020 12:31 PM  |   Last Updated: 20th March 2020 12:31 PM   |  A+A-


Nirbhaya convict Mukesh

ನಿರ್ಭಯಾ ಹತ್ಯಾಚಾರಿ ಮುಖೇಶ್ ಸಿಂಗ್

Posted By : Srinivasamurthy VN
Source : PTI

ನವದೆಹಲಿ: ಸತತ 8 ವರ್ಷಗಳ ಬಳಿಕ ನಿರ್ಭಯಾ ಹತ್ಯಾಚಾರಿಗಳನ್ನು ಇಂದು ಮುಂಜಾನೆ ಗಲ್ಲಿಗೇರಿಸಲಾಗಿದ್ದು, ಪ್ರಕರಣ ಅಪರಾಧಿಗಳಲ್ಲಿ ಒಬ್ಬ ತನ್ನ ಮರಣಾನಂತರ ತನ್ನ ದೇಹದ ಅಂಗಗಳನ್ನು ದಾನ ಮಾಡುವಂತೆ ಅಧಿಕಾರಿಗಳಲ್ಲಿ ತನ್ನ ಆಸೆ ಹೇಳಿಕೊಂಡಿದ್ದನಂತೆ.

ಹೌದು.. ನಿರ್ಭಯಾ ಹತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿಯಾದ ಮುಖೇಶ್ ಸಿಂಗ್ ತನ್ನನ್ನು ಗಲ್ಲಿಗೇರಿಸಿದ ಬಳಿಕ ತನ್ನ ದೇಹದ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ದಾನ ಮಾಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾನೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಪತ್ರ ನೀಡಿರುವ ಮುಖೇಶ್ ಸಿಂಗ್ ತನ್ನ ಕೊನೆಯ ಕ್ಷಣದಲ್ಲಿ ಅತೀವ ಭಾವುಕನಾಗಿದ್ದ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ.

ಇನ್ನು ಪ್ರಕರಣದ ಮತ್ತೋರ್ವ ಅಪರಾಧಿ ವಿನಯ್ ಶರ್ಮಾ ಜೈಲಿನ ಸೂಪರಿಂಟೆಡ್ ಗೆ ತಾನು ಜೈಲಿನಲ್ಲಿದ್ದಾಗ ರಚಿಸಿದ್ದ ಪೇಯಿಂಟಿಂಗ್ಸ್ ಗಳನ್ನು ನೀಡಿದ್ದಾನೆ. ಅಂತೆಯೇ ತನ್ನ ಬಳಿ ಇದ್ದ ಹನುಮಾನ್ ಚಾಲೀಸಾ ಮತ್ತು ಕೆಲ ಫೋಟೋಗಳನ್ನು ತನ್ನ ಕುಟುಂಬಸ್ಥರಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ.

ಆದರೆ ತೀವ್ರ ದುಃಖದಲ್ಲಿದ್ದ ಮತ್ತಿಬ್ಬರು ಅಪರಾಧಿಗಳಾದ ಪವನ್ ಗುಪ್ತಾ ಮತ್ತು ಅಕ್ಷಯ್ ಕುಮಾರ್ ಸಿಂಗ್ ಯಾವುದೇ ರೀತಿಯ ಮಾತುಗಳನ್ನಾಡದೇ ಅಂತಿಮ ಕ್ಷಣದವರೆಗೂ ಮೌನವಾಗಿದ್ದರು. ಅಪರಾಧಿಗಳೆಲ್ಲರೂ ಲಿಖಿತ ರೂಪದಲ್ಲಿ ತಮ್ಮ ತಮ್ಮ ಕೊನೆಯ ಆಸೆಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ನೇಹಾ ಬನ್ಸಾಲ್ ಸಮ್ಮುಖದಲ್ಲಿ ಪತ್ರ ನೀಡಿದ್ದಾರೆ ಎಂದು ತಿಳಿದುಬಂದಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp