ಪಠಾಣ್'ಕೋಟ್: ತರಬೇತಿ ಚಟುವಟಿಕೆ ವೇಳೆ ಓರ್ವ ಯೋಧ ಸಾವು, ಇಬ್ಬರಿಗೆ ಗಾಯ

ಪಂಜಾಬ್ ರಾಜ್ಯದ ಪಠಾಣ್ ಕೋಟ್ ನಲ್ಲಿ ನಡೆಸಲಾದ ಸೇನಾ ತರಬೇತಿ ಚಟುವಟಿಕೆ ವೇಳೆ ಓರ್ವ ಯೋಧ ಸಾವನ್ನಪ್ಪಿದ್ದು, ಇಬ್ಬರು ಯೋಧರಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಂಜಾಬ್ ರಾಜ್ಯದ ಪಠಾಣ್ ಕೋಟ್ ನಲ್ಲಿ ನಡೆಸಲಾದ ಸೇನಾ ತರಬೇತಿ ಚಟುವಟಿಕೆ ವೇಳೆ ಓರ್ವ ಯೋಧ ಸಾವನ್ನಪ್ಪಿದ್ದು, ಇಬ್ಬರು ಯೋಧರಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ. 

ಹವಾಮಾನ ವೈಪರೀತ್ಯದಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 9 ಕಾರ್ಪ್‌ಗಳ ಅಡಿಯಲ್ಲಿ ತರಬೇತಿ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಈ ವೇಳೆ ಎದುರಾದ ಹವಾಮಾನ ವೈಪರೀತ್ಯದಿಂದ ಓರ್ವ ಯೋಧ ಪ್ರಾಣ ಕಳೆದುಕೊಂಡಿದ್ದಾರೆಂದು ಸೇನಾ ಮೂಲಗಳು ಮಾಹಿತಿ ನೀಡಿವೆ. 

ಗಾಯಗೊಂಡಿರುವ ಇಬ್ಬರು ಯೋಧರನ್ನು ಕೂಡಲೇ ಪಠಾಣ್ ಕೋಟ್ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com