ಭುವನೇಶ್ವರ: ಬಹುತೇಕ ತರಕಾರಿಗಳ ಬೆಲೆ ಕೆಲವು ತಿಂಗಳುಗಳಿಂದ ದೇಶದೆಲ್ಲೆಡೆ ಗಗನಕ್ಕೇರಿತ್ತು. ಈ ನಡುವೆ ಒಡಿಶಾ ರಾಜ್ಯದಲ್ಲಿ ದುಬಾರಿ ದರದಲ್ಲಿ ಮಾರಾಟಗೊಳ್ಳುತ್ತಿದ್ದ ತರಕಾರಿಗಳ ಬೆಲೆ ಕುಸಿದಿದೆ.
ಈ ಬಾರಿ ಇಳುವರಿ ಚೆನ್ನಾಗಿ ಆಗಿರುವುದೇ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗುತ್ತಿದೆ. ತರಕಾರಿಗಳ ಬೆಲೆ ಅರ್ಧಕ್ಕರ್ಧ ಕಡಿತಗೊಂಡಿರುವುದಾಗಿ ತಿಳಿದುಬಂದಿದೆ.
ಕಾಲಿಫ್ಲವರ್ ಈ ಹಿಂದೆ ಪ್ರತಿ ಕೆ.ಜಿ 40 ರೂ.ಗಳಿಗೆ ಮಾರಾಟಗೊಳ್ಳುತ್ತಿತ್ತು. ಇದೀಗ್ 20 ರೂ.ಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ವಿದ್ಯುತ್ ದರ ಏರಿಸಲು ಬೆಸ್ಕಾಮ್ ಚಿಂತನೆ
ಕಿಲೊ 30 ರೂ. ಬದನೆಕಾಯಿಗೆ ಈಗ 15 ರೂ. ಅದೇ ರೀತಿ ಟೊಮೆಟೊ, ಕುಂಬಳಕಾಯಿ ಬೆಲೆಗಳೂ ಅರ್ಧಕ್ಕರ್ಧ ಕಡಿತಗೊಂಡಿವೆ. ಇದರಿಂದಾಗಿ ಜನಸಾಮಾನ್ಯರು ನಿಟ್ಟುಸಿರುಬಿಡುವಂತಾಗಿದ್ದು ರಾಜ್ಯದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
Advertisement