ಎಫ್ಇಎಂಎ ಪ್ರಕರಣ: ವಿಚಾರಣೆಗೆ ಹಾಜರಾಗಲು ಯಾಮಿ ಗೌತಮ್ ಗೆ ಇಡಿ ಸಮನ್ಸ್

ವಿದೇಶಿ ವಿನಿಮಯ ಕಾನೂನಿಗೆ ಸಂಬಂಧಿಸಿದ ಎಫ್ಇಎಂಎ ಪ್ರಕರಣದಲ್ಲಿ ನಟಿ ಯಾಮಿ ಗೌತಮ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದ್ದು ಮುಂದಿನ ವಾರ ವಿಚಾರಣೆಗೆ ಹಾಜರಾಗಬೇಕಿದೆ. 
ಯಾಮಿ ಗೌತಮ್-ಆದಿತ್ಯ ಧಾರ್
ಯಾಮಿ ಗೌತಮ್-ಆದಿತ್ಯ ಧಾರ್

ಮುಂಬೈ: ವಿದೇಶಿ ವಿನಿಮಯ ಕಾನೂನಿಗೆ ಸಂಬಂಧಿಸಿದ ಎಫ್ಇಎಂಎ ಪ್ರಕರಣದಲ್ಲಿ ನಟಿ ಯಾಮಿ ಗೌತಮ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದ್ದು ಮುಂದಿನ ವಾರ ವಿಚಾರಣೆಗೆ ಹಾಜರಾಗಬೇಕಿದೆ. 

ಈ ಹಿಂದೆಯೂ ಯಾಮಿ ಗೌತಮ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಅವರು ತನಿಖಾ ಸಂಸ್ಥೆ ಎದುರು ಹಾಜರಾಗಲು ಆಗಿರಲಿಲ್ಲ. 1.5 ಕೋಟಿ ರೂಪಾಯಿ ಹಣ ಬ್ಯಾಂಕ್ ಖಾತೆಗೆ ಜಮಾವಣೆಯಾಗಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. 

ಸಿವಿಲ್ ಪ್ರೊಸೀಡಿಂಗ್ಸ್ ಗೆ ಅನುಗುಣವಾಗಿ ಈ ತನಿಖೆ ನಡೆಯುತ್ತಿದೆ. ತಮಿಳು, ತೆಗುಲು ಸಿನಿಮಾಗಳಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಿಂದಿ ಸಿನಿಮಾಗಳಲ್ಲಿ ಯಾಮಿ ಗೌತಮ್ ನಟಿಸಿದ್ದಾರೆ. ಕಳೆದ ತಿಂಗಳು ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಅವರನ್ನು ವಿವಾಹವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com