ಗುಜರಾತ್: ಪತಿ ಸತ್ತಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ 18.5 ಲಕ್ಷ ರೂ. ಜೀವ ವಿಮೆ ಹಣ ಪಡೆದಿದ್ದ ಮಹಿಳೆ ಬಂಧನ!

ತನ್ನ ಪತಿಯ ಸಾವಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದರಿಂದ 18.5 ಲಕ್ಷ ರೂ.ಗಳನ್ನು ಪಡೆದ ಆರೋಪದ ಮೇಲೆ 35 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್: ತನ್ನ ಪತಿಯ ಸಾವಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದರಿಂದ 18.5 ಲಕ್ಷ ರೂ.ಗಳನ್ನು ಪಡೆದ ಆರೋಪದ ಮೇಲೆ 35 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ 

ಮೋಸ ಮತ್ತು ವಂಚನೆ ಆರೋಪದ ಮೇಲೆ ಆರೋಪಿ ಮಹಿಳೆ ನಂದಾ ಮರಾಠಿ ಮತ್ತು ವೈದ್ಯ ಹರಿಕೃಷ್ಣ ಸೋನಿ ಎಂಬಾತನನ್ನು ನಗರ ಅಪರಾಧ ವಿಭಾಗ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2019ರಲ್ಲಿ ತಾನು ಮೃತಪಟ್ಟಿರುವುದಾಗಿ ತೋರಿಸುವ ಮೂಲಕ ತನ್ನ ಪತ್ನಿ ತಮ್ಮ ಜೀವ ವಿಮಾ ಪಾಲಿಸಿಯಿಂದ 18.5 ಲಕ್ಷ ರೂ. ಪಡೆದಿರುವುದಾಗಿ ತಿಳಿದ ನಿಮೇಶ್ ಮರಾಠಿ ಪೊಲೀಸರಿಗೆ ದೂರು ನೀಡಿದ್ದರು. 

ಈ ದೂರಿನನ್ವಯ ತನಿಖೆ ನಡೆಸಿದ ಪೊಲೀಸರಿಗೆ ನಂದಾ ಮರಾಠಿ 2019ರಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಮೃತಪಟ್ಟಿರುವುದಾಗಿ ಹೇಳಿ ವೈದ್ಯ ಸೋನಿಯಿಂದ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ತನ್ನ ಪತಿಗೆ ಅರಿವಿಲ್ಲದೆ ಆರೋಪಿ 18.5 ಲಕ್ಷ ರೂ.ಗಳನ್ನು ಪಡೆಯಲು ಎರಡು ವಿಮಾ ಸಂಸ್ಥೆಗಳಿಗೆ ದಾಖಲೆಗಳನ್ನು ಸಲ್ಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com