ರಾಜಕೀಯದ ನಿರ್ಧಾರವನ್ನು ಮರುಪರಿಶೀಲಿಸುತ್ತೇನೆ: ರಜನಿಕಾಂತ್

ಕಳೆದ ವರ್ಷ ರಾಜಕೀಯದಿಂದ ದೂರವಿರುವುದಾಗಿ ಘೋಷಿಸುವ ಮೂಲಕ ಅನೇಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಸೋಮವಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ಹೇಳಿದ್ದಾರೆ. 
ರಜನಿಕಾಂತ್
ರಜನಿಕಾಂತ್
Updated on: 

ಚೆನ್ನೈ: ಕಳೆದ ವರ್ಷ ರಾಜಕೀಯದಿಂದ ದೂರವಿರುವುದಾಗಿ ಘೋಷಿಸುವ ಮೂಲಕ ಅನೇಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಸೋಮವಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ಹೇಳಿದ್ದಾರೆ. 

ಆರೋಗ್ಯದ ಕಾರಣದಿಂದ ರಾಜಕೀಯ ಬರಲು ಆಗುತ್ತಿಲ್ಲ ಎಂದು ಹೇಳಿದ್ದ ಸುಮಾರು ಅರ್ಧವರ್ಷದ ನಂತರ ಇದೀಗ ಮತ್ತೆ ರಾಜಕೀಯಕ್ಕೆ ಕಾಲಿಡುವ ಬಗ್ಗೆ ರಜಿನಿ ಮಕ್ಕಲ್ ಮಂದಿರಂ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಚರ್ಚಿಸುವುದಾಗಿ ನಟ ಹೇಳಿದರು.

ಕಳೆದ ವರ್ಷ ಡಿಸೆಂಬರ್ 29 ರಂದು ರಾಜಕೀಯಕ್ಕೆ ಧುಮುಕ್ಕುವುದಿಲ್ಲ ಮತ್ತು ಮೊದಲೇ ಘೋಷಿಸಿದಂತೆ ಪಕ್ಷವನ್ನು ಘೋಷಿಸುವುದಿಲ್ಲ ಎಂದು ರಜನಿಕಾಂತ್ ಹೇಳಿಕೆ ನೀಡಿದ್ದರು. ಆದರೆ, ರಜನಿಕಾಂತ್ ಎಂದಿಗೂ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಹೇಳಿಲ್ಲ, ಈಗ ಚುನಾವಣಾ ಕಣಕ್ಕೆ ಸ್ಪರ್ಧಿಸುವುದಿಲ್ಲ,  ರಜಿನಿ ಮಕ್ಕಲ್ ಮಂದಿರವನ್ನು ವಿಸರ್ಜಿಸುವುದಿಲ್ಲ ಎಂದು ಅವರು ಹೇಳಿದ್ದರು ಎಂದು ಅವರ  ಆಪ್ತ ಮತ್ತು ಗಾಂಧಿಯಾ ಮಕ್ಕಳ್ ಅಯ್ಯಕ್ಕಂ ಸ್ಥಾಪಕ ತಮಿಲರುವಿ ಮಣಿಯನ್ ಹೇಳಿದ್ದಾರೆ.

ನಾಳೆಯೇ ರಾಜಕೀಯಕ್ಕೆ ಬರುವುದಾಗಿ ರಜನಿಕಾಂತ್ ಹೇಳಿದರೆ ಗಾಂಧಿಯಾ ಮಕ್ಕಲ್ ಇಯಕ್ಕಂ ಅವರ ಜೊತೆಗೂಡಲಿದೆ. ಒಂದು ವೇಳೆ ರಜನಿಕಾಂತ್ ರಾಜಕೀಯಕ್ಕೆ ಬಾರದೆ ಇದ್ದರೂ, ಸಹೋದರಿ ಪಕ್ಷವಾಗಿ ಕಾರ್ಯವನ್ನು ಮುಂದುವರೆಸಲಿದೆ ಎಂದು ಮಣಿಯನ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com