ಬಂಗಾಳ: 77 ಬಿಜೆಪಿ ಶಾಸಕರಿಗೆ ಕೇಂದ್ರದಿಂದ ಭದ್ರತೆ 

ಪಶ್ಚಿಮ ಬಂಗಾಳದಲ್ಲಿ ಶಾಸನ ಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ಎಲ್ಲಾ 77 ಶಾಸಕರಿಗೆ ಕೇಂದ್ರದಿಂದ ಭದ್ರತೆಯನ್ನು ಒದಗಿಸಲಾಗಿದೆ. 
ಬಿಜೆಪಿ
ಬಿಜೆಪಿ
Updated on: 

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಶಾಸನ ಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ಎಲ್ಲಾ 77 ಶಾಸಕರಿಗೆ ಕೇಂದ್ರದಿಂದ ಭದ್ರತೆಯನ್ನು ಒದಗಿಸಲಾಗಿದೆ. 

ಬಿಜೆಪಿ ಶಾಸಕರಿಗೆ ಬೆದರಿಕೆ, ಅಪಾಯ ಇರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಒದಗಿಸಲಾಗಿದೆ. ಶಸ್ತ್ರಸಜ್ಜಿತ ಕಮಾಂಡೋಗಳು ಬಿಜೆಪಿ ಶಾಸಕರಿಗೆ ಭದ್ರತೆಯನ್ನು ಒದಗಿಸಲಿದ್ದು, ಕೇಂದ್ರೀಯ ಸಂಸ್ಥೆಗಳಿಂದ ಬಂದ ವರದಿಯ ಆಧಾರದಲ್ಲಿ ಕೇಂದ್ರ ಗೃಹ ಸಚಿವಾಲಯ ಭದ್ರತೆ ನೀಡುವುದಕ್ಕೆ ಅನುಮೋದನೆ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರ ರಾಜಕೀಯ ಹಿಂಸಾಚಾರ ನಡೆದಿದ್ದರ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಉನ್ನತ ಮಟ್ಟದ ತಂಡವನ್ನು ಕಳಿಸಿತ್ತು. 61 ಶಾಸಕರಿಗೆ X ಶ್ರೇಣಿಯ ಭದ್ರತೆ ನೀಡಲಾಗಿದ್ದು, ಉಳಿದವರಿಗೆ Y ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ. ವಿಪಕ್ಷ ನಾಯಕ ಸುವೇಂದು ಅಧಿಕಾರಿಗೆ ಝೆಡ್ ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com