ಜೋಧ್ ಪುರದಲ್ಲಿ ವೇಗವಾಗಿ ನುಗ್ಗಿ 10 ಮಂದಿಯ ಮೇಲೆ ಹರಿದ ಆಡಿ ಕಾರು: ವಿಡಿಯೋ ವೈರಲ್

ಜೋಧ್ ಪುರದ ಜನನಿಬಿಡ ಏಮ್ಸ್ ರಸ್ತೆಯಲ್ಲಿ ವೇಗವಾಗಿ ನುಗ್ಗಿದ ಆಡಿ ಕಾರು 10 ಮಂದಿಯ ಮೇಲೆ ಹರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.
ಅಪಘಾತದ ದೃಶ್ಯ
ಅಪಘಾತದ ದೃಶ್ಯ
Updated on

ಜೋಧ್ ಪುರ: ಜೋಧ್ ಪುರದ ಜನನಿಬಿಡ ಏಮ್ಸ್ ರಸ್ತೆಯಲ್ಲಿ ವೇಗವಾಗಿ ನುಗ್ಗಿದ ಆಡಿ ಕಾರು 10 ಮಂದಿಯ ಮೇಲೆ ಹರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಘಟನೆಯಲ್ಲಿ 16 ವರ್ಷದ ಬಾಲಕ ಸಾವನ್ನಪ್ಪಿದ್ದು, 10 ಮಂದಿಗೆ ತೀವ್ರವಾದ ಗಾಯಗಳಾಗಿದೆ.

ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಗುಡಿಸಲುಗಳ ಮೇಲೆ ಹರಿದು ಜನರಿಗೆ ಡಿಕ್ಕಿ ಹೊಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಘಟನೆ ನಡೆದ ಬಳಿಕ ಕಾರು ಚಾಲಕ ಸ್ವತಃ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು ತನಿಖೆ ಪ್ರಗತಿಯಲ್ಲಿದೆ.

ಅಮಿತ್ ನಗರ್ ಎಂಬಾತ ಜೋಧ್ ಪುರದಿಂದ ಕಾರನ್ನು ಚಲಾಯಿಸುತ್ತಿದ್ದ. ಪಾಲ್ ರಸ್ತೆಯಿಂದ ಏಮ್ಸ್ ನೆಡೆಗೆ ತೆರಳುತ್ತಿದ್ದಾಗ ನಗರ್ ಗೆ ಏಕಾ ಏಕಿ ಕಾರಿನ ನಿಯಂತ್ರಣ ತಪ್ಪಿದೆ ನಂತರ ಆಕ್ಟೀವಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಬಿದ್ದಿದ್ದಾರೆ.

ನಂತರದಲ್ಲಿ ಕಾರು ಮತ್ತಷ್ಟು ವೇಗವಾಗಿ ಚಲಿಸಿ ಮೋಟರ್ ಸೈಕಲ್ ಹಾಗೂ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರವಾಹನಗಳು ಆಟಿಕೆಗಳಂತೆ ಹಾರುತ್ತಿದ್ದದ್ದು ವಿಡಿಯೋದಲ್ಲಿ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಏಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com