ಲಖೀಂಪುರ ಹಿಂಸಾಚಾರ ಪ್ರಕರಣ: ಶಾಂತಿಭಂಗ ಆರೋಪ, ಪ್ರಿಯಾಂಕಾ ವಾದ್ರಾ ಸೇರಿ 11 ಮಂದಿ ವಿರುದ್ಧ ಎಫ್ಐಆರ್

ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
Updated on

ಲಖನೌ: ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಸೀತಾಪುರ ಜಿಲ್ಲೆಯ ಹರ್ಗಾಂವ್ ಪೊಲೀಸ್ ಠಾಣೆಯ ಎಸ್ ಹೆಚ್ ಒ ಮಾಹಿತಿ ನೀಡಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ, ದೀಪೇಂದ್ರ ಹೂಡ ಮತ್ತು ಅಜಯ್ ಕುಮಾರ್ ಲಾಲು ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಿಯಾಂಕಾ ವಾದ್ರಾ ಬಂಧನ ಸಾಧ್ಯತೆ
ಅಂತೆಯೇ ಕಳೆದ 36 ಗಂಟೆಗಳಿಂದ ಉತ್ತರ ಪ್ರದೇಶದಲ್ಲಿರುವ ಸೀತಾಪುರದಲ್ಲಿ ಗೃಹಬಂಧನದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪ್ರಿಯಾಂಕಾ ವಾದ್ರಾ ವಿರುದ್ಧ ಸೆಕ್ಷನ್ 144 ಉಲ್ಲಂಘನೆ ಮತ್ತು ಶಾಂತಿ ಭಂಗದ ಆರೋಪ ಹೊರಿಸಲಾಗಿದೆ. ಅಲ್ಲದೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಕೂಡ ಇದೆ. 

ಇನ್ನು ಪ್ರಿಯಾಂಕಾ ಗಾಂಧಿ ಈ ಹಿಂದೆ ಲಖಿಂಪುರ್ ಹಿಂಸಾಚಾರ (Lakhimpur Kheri Violence) ಬಗ್ಗೆ ಟ್ವಿಟರ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದರು. ಅವರು ಬಯಸಿದರೆ ಪೊಲೀಸರು ನನ್ನನ್ನು ಬಂಧಿಸಬಹುದು. ಆದರೆ ನಾನು ರೈತ ಕುಟುಂಬಗಳನ್ನು ಭೇಟಿಯಾಗದೆ ಹಿಂತಿರುಗುವುದಿಲ್ಲ ಎಂದು ಘೋಷಿಸಿದ್ದರು.

ವಿಡಿಯೋದಲ್ಲೇನಿದೆ?
ಪ್ರಿಯಾಂಕಾ ಗಾಂಧಿ ಟ್ವಿಟರ್ ಮೂಲಕ ಹಂಚಿಕೊಂಡಿದ್ದ ವೀಡಿಯೊದಲ್ಲಿ ನಿಮ್ಮ ಸರ್ಕಾರದಲ್ಲಿ ಸಚಿವರೊಬ್ಬರ ಮಗ ರೈತರನ್ನು ಕಾರಿನ ಮೂಲಕ ಗುದ್ದಿಕೊಂಡು ಹೋಗಿ ಅವರನ್ನು ಹತ್ಯೆ ಮಾಡಿದ್ದಾನೆ. ಈ ವೀಡಿಯೊವನ್ನು ನೋಡಿ.. ಮತ್ತು ಈ ಸಚಿವರನ್ನು ಏಕೆ ವಜಾ ಮಾಡಲಿಲ್ಲ ಮತ್ತು ಅಮಾಯಕ ರೈತರ ಮೇಲೆ ಕಾರು ಹರಿಸಿದ ಆತನನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ ಎಂದು ಈ ದೇಶಕ್ಕೆ ತಿಳಿಸಿ. ನೀವು ನನ್ನಂತಹ ವಿರೋಧ ಪಕ್ಷದ ನಾಯಕರನ್ನು ಆದೇಶ ಮತ್ತು ಎಫ್ ಐಆರ್ ಇಲ್ಲದೇ ವಶಕ್ಕೆ ತೆಗೆದುಕೊಂಡಿದ್ದೀರಿ. ಆದರೆ ಈ ವ್ಯಕ್ತಿ ಇನ್ನೂ ಏಕೆ ಮುಕ್ತವಾಗಿ ತಿರುಗಾಡುತ್ತಿದ್ದಾನೆಂದು ಅವರು ಕೇಳಿದರು. ಅಲ್ಲದೆ ರೈತರ ಮೇಲೆ ಕಾರು ಹರಿದ ವಿಡಿಯೋವನ್ನು ಪ್ರದರ್ಶಿಸಿದರು.

ಸೀತಾಪುರ ಗೆಸ್ಟ್ ಹೌಸ್ ಬಳಿ ಕಾಂಗ್ರೆಸ್ ಪ್ರತಿಭಟನೆ
ಇನ್ನು ಪ್ರಿಯಾಂಕಾಗಾಂಧಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿರುವ ಸೀತಾಪುರ ಗೆಸ್ಟ್ ಹೌಸ್ ನಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಪ್ರತಿಭಟನೆ ಮುಂದುವರೆದಿದೆ. ಪ್ರಿಯಾಂಕಾ ಗಾಂಧಿ ಅವರನ್ನು ಕೂಡಲೇ ಬಿಡುಗಡೆ ಮಾಡಿ ಅಮಾಯಕ ರೈತರ ಪ್ರಾಣ ತೆಗೆದ ತಪ್ಪಿತಸ್ಥರನ್ನು ಬಂಧಿಸುವಂತೆ ಕಾರ್ಯಕರ್ತರು ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ.

Related Article

ಉತ್ತರ ಪ್ರದೇಶದಲ್ಲಿ ಯಾರೇ ಪ್ರತಿಭಟನೆ ಮಾಡಲಿ, ಅವರಿಗೆ ಹೊಡೆತ, ತುಳಿತವೇ ಉತ್ತರ: ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕ

ಲಖಿಂಪುರ್ ಹಿಂಸಾಚಾರ ಘಟನೆ: ಅಮಿತ್ ಶಾ'ರನ್ನು ಭೇಟಿ ಮಾಡಲಿರುವ ಪಂಜಾಬ್ ಸಿಎಂ ಛನ್ನಿ

ಲಖಿಂಪುರ್ ಖೇರಿ ಹಿಂಸಾಚಾರ: ರಾಜಕೀಯ ಚಟುವಟಿಕೆಗೆ ಇಂಬು, ಜಿಲ್ಲೆಗೆ ಭೇಟಿ ನೀಡಲು ಮುಖಂಡರು ಮುಂದು

ಲಖಿಂಪುರ ಹಿಂಸಾಚಾರ: ನ್ಯಾಯದ ಹೋರಾಟದಲ್ಲಿ ರೈತರಿಗೆ ಗೆಲುವು ಎಂದ ರಾಹುಲ್ ಗಾಂಧಿ

ಲಖಿಂಪುರ್ ಹಿಂಸಾಚಾರ: ರೈತರು ಆಕ್ರೋಶಗೊಂಡಿದ್ದಾರೆ, ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಬೇಡಿ - ಬಿಜೆಪಿ ಕಾರ್ಯಕರ್ತರಿಗೆ ಬಿಕೆಯು ಮನವಿ

ಪ್ರತಿಭಟನಾ ನಿರತ ರೈತರು - ಯುಪಿ ಸರ್ಕಾರದ ನಡುವೆ ಮಾತುಕತೆ ಯಶಸ್ವಿ: ಮೃತರ ಕುಟುಂಬಕ್ಕೆ 45 ಲಕ್ಷ ರೂ. ಪರಿಹಾರ

ಕೃಷಿ ಕಾಯ್ದೆಗಳನ್ನು ತಡೆಹಿಡಿಯಲಾಗಿದೆ; ನಿಮ್ಮ ಪ್ರತಿಭಟನೆ ಯಾವುದರ ವಿರುದ್ಧ: ರೈತರ ಸಂಘಕ್ಕೆ 'ಸುಪ್ರೀಂ' ಪ್ರಶ್ನೆ

ಲಖಿಂಪುರ್ ಖೇರಿ ಹಿಂಸಾಚಾರ: ಪ್ರಿಯಾಂಕಾ ಗಾಂಧಿ, ದೀಪೇಂದ್ರ ಹೂಡಾ ವಶಕ್ಕೆ; ಅಖಿಲೇಶ್, ಎಸ್'ಸಿ ಮಿಶ್ರಾ ಗೆ ಲಖನೌನಲ್ಲಿ ಪೊಲೀಸರ ತಡೆ

ಲಖಿಂಪುರ್ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಸೇರಿ ಇತರರ ವಿರುದ್ಧ ಎಫ್ಐಆರ್

ಹರಗಾಂವ್ ನಲ್ಲಿ ಪ್ರಿಯಾಂಕಾ ಗಾಂಧಿ ಬಂಧನ: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಹೇಳಿಕೆ

ಉತ್ತರ ಪ್ರದೇಶ: ಲಖಿಂಪುರ್ ಖೇರಿಯಲ್ಲಿ ಹಿಂಸಾಚಾರ; ನಾಲ್ವರು ರೈತರು ಸೇರಿ 8 ಮಂದಿಯ ಹತ್ಯೆ

ಉತ್ತರ ಪ್ರದೇಶದಲ್ಲಿ ರೈತರ ಹತ್ಯಾಕಾಂಡ: ರಾಹುಲ್‌ ಖಂಡನೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com