ಕೋವಿಡ್-19: ತಮಿಳುನಾಡು ವಂಡಲೂರು ಮೃಗಾಯಲದ 4 ಸಿಂಹಗಳಿಗೆ ಡೆಲ್ಟಾ ರೂಪಾಂತರಿ ಸೋಂಕು

ತಮಿಳುನಾಡಿನ ಚೆನ್ನೈನಲ್ಲಿರುವ ವಂಡಲೂರಿನಲ್ಲಿರುವ ಮೃಗಾಲಯದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಇದೀಗ ಮೃಗಾಲಯದ ಈ ಪರಿಸ್ಥಿತಿಗೆ ವೈರಸ್ ರೂಪಾಂತರಿ ಡೆಲ್ಟಾ ಕಾರಣ ಎಂದು ತಜ್ಞರು ಹೇಳಿದ್ದಾರೆ.
ವಂಡಲೂರು ಮೃಗಾಲಯ (ಪಿಟಿಐ ಚಿತ್ರ)
ವಂಡಲೂರು ಮೃಗಾಲಯ (ಪಿಟಿಐ ಚಿತ್ರ)

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿರುವ ವಂಡಲೂರಿನಲ್ಲಿರುವ ಮೃಗಾಲಯದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಇದೀಗ ಮೃಗಾಲಯದ ಈ ಪರಿಸ್ಥಿತಿಗೆ ವೈರಸ್ ರೂಪಾಂತರಿ ಡೆಲ್ಟಾ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಹೌದು.. ಪ್ರಸ್ತುತ ಮೃಗಾಲಯದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿರುವ ನಾಲ್ಕು ಸಿಂಹಗಳಲ್ಲಿ ಈ ಡೆಲ್ಟಾ ರೂಪಾಂತರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮೃಗಾಲಯದಲ್ಲಿ ತಜ್ಞರು ಸೋಂಕು ಪೀಡಿತ ಸಿಂಹಗಳ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಿದ್ದು ಈ ವೇಳೆ ಕೋವಿಡ್-19 ರೂಪಾಂತರ ವೈರಸ್ ಡೆಲ್ಚಾ  (ಬಿ.1.617.2) ಕಂಡುಬಂದಿದೆ. 

ಈ ವರ್ಷ ಮೇ 11 ರಂದು, ವಿಶ್ವ ಆರೋಗ್ಯ ಸಂಸ್ಥೆ ಬಿ .1.617.2 ವಂಶಾವಳಿಯನ್ನು ಕಾಳಜಿಯ ರೂಪಾಂತರಿ ತಳಿ (ವಿಒಸಿ) ಎಂದು ವರ್ಗೀಕರಿಸಿತ್ತು. ಇದು ಹೆಚ್ಚಿನ ಮತ್ತು ವೇಗದ ಪ್ರಸರಣ ಸಾಮರ್ಥ್ಯ ಹೊಂದಿದ್ದು,ಕಡಿಮೆ ತಟಸ್ಥೀಕರಣದ ಪುರಾವೆಗಳನ್ನು ತೋರಿಸಿದೆ ಎಂದು ಮೃಗಾಲಯದ ಉಪ ನಿರ್ದೇಶಕರು  ತಿಳಿಸಿದ್ದಾರೆ.

ಮೃಗಾಲಯದಲ್ಲಿರುವ 11 ಸಿಂಹಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ನಾಲ್ಕು ಸಿಂಹಗಳ ಮಾದರಿಯನ್ನು ಮೇ 24 ರಂದು ಸಂಗ್ರಹಿಸಿ, ಮೇ 29 ರಂದು ಏಳು ಸಿಂಹಗಳ ಮಾದರಿಯನ್ನು ಭೋಪಾಲ್‌ನ ICAR- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಗೆ  ಕಳುಹಿಸಲಾಗಿತ್ತು. ಈ ವರದಿ ಇದೀಗ ಬಂದಿದ್ದು, ಈ ಪೈಕಿ 4 ಸಿಂಹಗಳಲ್ಲಿ ಡೆಲ್ಟಾ ರೂಪಾಂತರಿ ತಳಿ ಪತ್ತೆಯಾಗಿದೆ.   

ಒಂಬತ್ತು ವರ್ಷದ ಸಿಂಹಿಣಿ ನೀಲಾ ಮತ್ತು 12 ವರ್ಷ ವಯಸ್ಸಿನ ಪಾಥ್ಬನಾಥನ್ ಎಂಬ ಗಂಡು ಸಿಂಹ ಈ ತಿಂಗಳ ಆರಂಭದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com