ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಡಿ ಆರ್ ಡಿ ಒ ಬೇಹುಗಾರಿಕೆ: ಪಾಕಿಸ್ತಾನದ ಹನಿ ಟ್ರ್ಯಾಪ್ ಲಿಂಕ್ ಪತ್ತೆಹಚ್ಚಿದ ಒಡಿಶಾ ಕ್ರೈಂ ಬ್ರ್ಯಾಂಚ್

ಅರೋಪಿ ಮಹಿಳೆಗೆ ಸಂಬಂಧಿಸಿದ ಫೇಸ್ ಬುಕ್ ಖಾತೆಯನ್ನು ಪಾಕಿಸ್ತಾನ ನೆಲದಿಂದ ನಿಯಂತ್ರಿಸಲಾಗುತ್ತಿತ್ತು ಎನ್ನುವ ಆಘಾತಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದೆ.  

ಭುವನೇಶ್ವರ: ಡಿ ಆರ್ ಡಿ ಒ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಒಡಿಶಾ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಪಾಕಿಸ್ತಾನ ಲಿಂಕ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. 

ರಾಜ್ಯದ ಚಂಡಿಪುರ್ ನಲ್ಲಿದ್ದ ಡಿ ಆರ್ ಡಿ ಒ ಕಚೇರಿಯಲ್ಲಿ ಕೆಸಲ ನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ಈ ಹಿಂದೆ ಪ್ರಕರಣದಡಿ ಬಂಧಿಸಲಾಗಿತ್ತು. 

ಬಂಧಿತ ಉದ್ಯೋಗಿಗಳನ್ನು ಮಹಿಳೆಯೊಬ್ಬಳು ಹನಿ ಟ್ರ್ಯಾಪ್ ಮಾಡಿ ಗೌಪ್ಯ ಮಾಹಿತಿ ಪಡೆದುಕೊಂಡು ಪಾಕಿಸ್ತಾನಕ್ಕೆ ರವಾನೆ ಮಾಡಲಾಗಿತ್ತು ಎನ್ನಲಾಗಿದೆ. 

ಆ ಮಹಿಳೆಗೆ ಸಂಬಂಧಿಸಿದ ಫೇಸ್ ಬುಕ್ ಖಾತೆಯನ್ನು ಪಾಕಿಸ್ತಾನ ನೆಲದಿಂದ ನಿಯಂತ್ರಿಸಲಾಗುತ್ತಿತ್ತು ಎನ್ನುವ ಆಘಾತಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದೆ.  ಮಹಿಳೆಯ ಹೆಸರಿನಲ್ಲಿ ಒಟ್ಟು ಮೂರು ಫೇಸ್ ಬುಕ್ ಖಾತೆಗಳಿದ್ದು, ಅವುಗಳಲ್ಲಿ ಎರಡು ಇಸ್ಲಾಮಾಬಾದ್ ನಿಂದ ನಿಯಂತ್ರಿಸುತ್ತಿದ್ದರೆ, ಒಂದು ಖಾತೆಯನ್ನು ರಾವಲ್ಪಿಂಡಿಯಿಂದ ನಿಯಂತ್ರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com