ಲಕ್ನೊ-ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆಕೋರರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಏಳು ಮಂದಿ ಬಂಧನ 

ಲಕ್ನೊ-ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಒಟ್ಟು 7 ಮಂದಿಯನ್ನು ಕಲ್ಯಾಣ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ರೈಲ್ವೆ ಪೊಲೀಸ್ ಆಯುಕ್ತ ಕ್ವೈಸರ್ ಖಾಲಿದ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಲಕ್ನೊ-ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಒಟ್ಟು 7 ಮಂದಿಯನ್ನು ಕಲ್ಯಾಣ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ರೈಲ್ವೆ ಪೊಲೀಸ್ ಆಯುಕ್ತ ಕ್ವೈಸರ್ ಖಾಲಿದ್ ಹೇಳಿದ್ದಾರೆ.

ಇತರ ಮೂರು ಆರೋಪಿಗಳ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೊದಿಂದ ಮುಂಬೈ ಕಡೆಗೆ ರೈಲ್ವೆ ಪ್ರಯಾಣಿಸುತ್ತಿತ್ತು.

ಕಳೆದ ಶುಕ್ರವಾರ ರಾತ್ರಿ ಎಂಟು ಮಂದಿ ದುಷ್ಕರ್ಮಿಗಳು ಆಯುಧಗಳನ್ನು ತಮ್ಮ ಜೊತೆ ಒಯ್ದುಕೊಂಡು ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್ ಅನ್ನು ಮಹಾರಾಷ್ಟ್ರದ ಇಗತ್ಪುರಿ ಪಟ್ಟಣದಲ್ಲಿ ಹತ್ತಿದರು. ಸ್ವಲ್ಪ ಹೊತ್ತಿನಲ್ಲಿಯೇ ಪ್ರಯಾಣಿಕರನ್ನು ದರೋಡೆ ಮಾಡಲು ಆರಂಭಿಸಿದರು.

ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಸುಮಾರು 6 ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮುಂಬೈಯ ಕಸರ ಸ್ಟೇಷನ್ ನಲ್ಲಿ ರೈಲು ನಿಂತಾಗ ಪ್ರಯಾಣಿಕರು ಬೊಬ್ಬೆ ಹಾಕಲು ಆರಂಭಿಸಿದರು. ತಕ್ಷಣವೇ ರೈಲ್ವೆ ಪೊಲೀಸರು ಬಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ನಂತರ ಮತ್ತಿಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ಇತರ ನಾಲ್ವರಿಗೆ ಶೋಧ ಕಾರ್ಯ ಮುಂದುವರಿಸಿದರು.

ವಶಕ್ಕೆ ಪಡೆದವರಿಂದ 34 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸರು ಅತ್ಯಾಚಾರ ಮತ್ತು ದರೋಡೆ ಕೇಸು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com