ಆನ್ ಲೈನ್ ನಲ್ಲಿ 1 ಲಕ್ಷ ರೂ. ಹೈ ಎಂಡ್ ಲ್ಯಾಪ್ ಟಾಪ್ ಆರ್ಡರ್ ಮಾಡಿದವಳಿಗೆ ಸಿಕ್ಕಿದ್ದು ಖಾಲಿ ಡಬ್ಬ

ಅಷ್ಟು ದೊಡ್ಡ ಮೊತ್ತದ ಲ್ಯಾಪ್ ಟಾಪನ್ನು ಮೊದಲ ಬಾರಿಗೆ ತೆರೆಯುತ್ತಿರುವುದರಿಂದ ಎಕ್ಸೈಟ್ ಮೆಂಟ್ ತಾಳಲಾರದೆ ಡಬ್ಬದಿಂದ ಲ್ಯಾಪ್ ಟಾಪ್ ತೆರೆಯುವುದನ್ನೂ ವಿಡಿಯೋ ಮಾಡಲು ಆಕೆ ನಿರ್ಧರಿಸಿದ್ದಳು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿ: 22 ವರ್ಷದ ಎಂಜಿನಿಯರಿಂಗ್ ಪದವೀಧರೆಯೋರ್ವಳು ಅಮೇಜಾನ್ ಜಾಲತಾಣದಲ್ಲಿ ಏಸರ್ ಕಂಪನಿಯ ಹೈ ಎಂಡ್ ಲ್ಯಾಪ್ ಟಾಪ್ ಒಂದನ್ನು ಆರ್ಡರ್ ಮಾಡಿದ್ದ. ಅದರ ಬೆಲೆ 1.14 ಲಕ್ಷ ರೂ. ಅಷ್ಟೂ ಮೊತ್ತವನ್ನು ಆರ್ಡರ್ ಮಾಡುವ ಸಮಯದಲ್ಲೇ ಮುಂಚಿತವಾಗಿ ಆಕೆ ಪಾವತಿಸಿದ್ದಳು.

ಅಷ್ಟು ದೊಡ್ಡ ಮೊತ್ತದ ಲ್ಯಾಪ್ ಟಾಪನ್ನು ಮೊದಲ ಬಾರಿಗೆ ತೆರೆಯುತ್ತಿರುವುದರಿಂದ ಎಕ್ಸೈಟ್ ಮೆಂಟ್ ತಾಳಲಾರದೆ ಡಬ್ಬದಿಂದ ಲ್ಯಾಪ್ ಟಾಪ್ ತೆರೆಯುವುದನ್ನೂ ವಿಡಿಯೋ ಮಾಡಲು ಆಕೆ ನಿರ್ಧರಿಸಿದಳು. ಯೂಟ್ಯೂಬಿನಲ್ಲಿ ಅನ್ ಬಾಕ್ಸಿಂಗ್ ಎನ್ನುವ ವಿಡಿಯೋ ಪ್ರಕಾರವೇ ಹುಟ್ಟಿಕೊಂಡಿದೆ. ಅದರಲ್ಲಿ ಹೊಸ ಎಲೆಕ್ಟ್ರಾನಿಕ್ ಉಪಕರಣಗಳನ್ನು ಡಬ್ಬದಿಂದ ಹೊರತೆಗೆದು ಅದು ಹೇಗಿದೆ ಎಂಬುದನ್ನು ವೀಕ್ಷಕರಿಗೆ ತೋರಿಸಲಾಗುತ್ತದೆ. ಅದೇ ರೀತಿ ಮಾಡಲು ಕೊಚ್ಚಿಯ ಗ್ರಾಹಕಿ ಮುಂದಾಗಿದ್ದಳು.

ಡಬ್ಬ ಹೊರತೆಗೆಯುತ್ತಿದ್ದಂತೆಯೇ ಅರಳಬೇಕಿದ್ದ ಆಕೆಯ ವದನದಲ್ಲಿ ಆಘಾತಗೊಂಡ ಕಳೆ ಕಂಡುಬಂದಿತ್ತು. ಏಕೆಂದರೆ ಆಕೆಗೆ ಬಂದಿದ್ದ ಪಾರ್ಸೆಲ್ ಬಲ್ಲಿ ಕಾಗದದ ಚೂರು ಮತ್ತು ಮತ್ತು ರಟ್ಟು ಬಿಟ್ಟರೆ ಬೇರೇನೂ ಇರಲಿಲ್ಲ. ಆಕೆಗೆ ಖಾಲಿ ಡಬ್ಬ ಕಳಿಸಿಕೊಡಲಾಗಿತ್ತು.

ಈ ಬಗ್ಗೆ ಅಮೇಜಾನ್ ಕಸ್ಟಮರ್ ಕೇರ್ ನಲ್ಲಿ ದೂರು ದಾಖಲಿಸಿದ್ದರೂ ಆಕೆಯ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ. ಈ ಬಗ್ಗೆ ಗ್ರಾಹಕಿ ಯುವತಿ ಅಮೇಜಾನ್ ನಲ್ಲಿ ಮಾರಾಟ ಮಾಡಿರುವ ಸಂಸ್ಥೆ(ಸೆಲ್ಲರ್) ವಿರುದ್ಧ ಪೂಲೀಸ್ ದೂರನ್ನೂ ದಾಖಲಿಸಿದ್ದಾರೆ. ಯುವತಿ ತಾನು ರೆಕಾರ್ಡ್ ಮಾಡಿರುವ ವಿಡಿಯೋವನ್ನು ಪೊಲೀಸರಿಗೆ ಸಾಕ್ಷಿಯಾಗಿ ನೀಡಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com