ನಾಲ್ಕು ಕಾಲುಗಳುಳ್ಳ ಮಗುವಿಗೆ ಜನ್ಮ ನೀಡಿದ ತಾಯಿ!

ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 'ನಾಲ್ಕು' ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನಾಲ್ಕು ಕಾಲುಗಳುಳ್ಳ ಮಗು.
ನಾಲ್ಕು ಕಾಲುಗಳುಳ್ಳ ಮಗು.
Updated on

ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 'ನಾಲ್ಕು' ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಎಂಬ ಮಹಿಳೆ ನಾಲ್ಕು ಕಾಲುಗಳುಳ್ಳ ಮಗುವಿಗೆ ಜನ್ಮ ನೀಡಿದ್ದಾರೆ.

ಜನನದ ನಂತರ ಮಗುವಿನ ತೂಕ 2.3 ಕೆ.ಜಿ ಯಷ್ಟಿದೆ. ನವಜಾತ ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗ್ವಾಲಿಯರ್‌ನ ಜಯರೋಗ ಆಸ್ಪತ್ರೆಯ ಅಧೀಕ್ಷಕರೊಂದಿಗೆ ವೈದ್ಯರ ತಂಡವು ಶಿಶುವನ್ನು ಪರೀಕ್ಷಿಸಿತು.

ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಂಟ್ ಡಾ.ಆರ್.ಕೆ.ಎಸ್.ಧಕಡ್ ಅವರು ಮಾತನಾಡಿ, "ಮಗುವಿಗೆ ನಾಲ್ಕು ಕಾಲುಗಳಿವೆ, ಆಕೆಗೆ ದೈಹಿಕ ವಿಕಲತೆ ಇದೆ. ಬೆಳವಣಿಗೆ ಸಂದರ್ಭದಲ್ಲಿ ಕೆಲವು ಭ್ರೂಣಗಳು ಹೆಚ್ಚುವರಿಯಾಗುತ್ತವೆ, ಇದನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಭ್ರೂಣವು ಎರಡು ಭಾಗಗಳಾಗಿ ವಿಭಜನೆಯಾದಾಗ, ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ, ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ ಎಂದು ಹೇಳಿದ್ದಾರೆ.

''ಇದೀಗ ಮಕ್ಕಳ ವಿಭಾಗದ ವೈದ್ಯರು ದೇಹದ ಯಾವುದೇ ಭಾಗದಲ್ಲಿ ಬೇರೆ ಯಾವುದೇ ಅಂಗವಿಕಲತೆ ಇದೆಯೇ ಎಂದು ತಪಾಸಣೆ ನಡೆಸುತ್ತಿದ್ದು, ಪರೀಕ್ಷೆ ಬಳಿಕ ಆಕೆ ಆರೋಗ್ಯವಾಗಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಹೆಚ್ಚುವರಿ ಕಾಲುಗಳನ್ನು ತೆಗೆಯಲಾಗುತ್ತದೆ. ಇದರಿಂದ ಆಕೆ ಸಹಜ ಜೀವನ ನಡೆಸಬಹುದು ಎಂದು ತಿಳಿಸಿದ್ದಾರೆ.

ಸದ್ಯ ಕಮಲರಾಜ ಆಸ್ಪತ್ರೆಯ ಶಿಶುವೈದ್ಯಕೀಯ ವಿಭಾಗದ ವಿಶೇಷ ನವಜಾತ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶಿಶುವಿನ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಆಕೆಯ ಹೆಚ್ಚುವರಿ ಕಾಲುಗಳನ್ನು ತೆಗೆಯುವ ಚಿಂತನೆ ನಡೆಸಿದ್ದಾರೆ. ಸದ್ಯ ಹೆಣ್ಣು ಮಗು ಸಂಪೂರ್ಣ ಆರೋಗ್ಯವಾಗಿದೆ' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com