ದೇಶದಲ್ಲಿ ಕೊರೋನಾ ಏರಿಕೆ: ಒಂದೇ ದಿನ 20,038 ಹೊಸ ಪ್ರಕರಣ ಪತ್ತೆ; 47 ಸಾವು

ದೇಶದಲ್ಲಿ ಕೊರೋನಾ ಏರಿಳಿತ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 47 ಸೋಂಕಿತರು ಸಾವನ್ನಪ್ಪಿದ್ದು, 20, 038 ಹೊಸ ಪ್ರಕರಣ ಪತ್ತೆಯಾಗಿದೆ.
ಕೋವಿಡ್-19 ಸಾಂದರ್ಭಿಕ ಚಿತ್ರ
ಕೋವಿಡ್-19 ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ದೇಶದಲ್ಲಿ ಕೊರೋನಾ ಏರಿಳಿತ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 47 ಸೋಂಕಿತರು ಸಾವನ್ನಪ್ಪಿದ್ದು, 20, 038 ಹೊಸ ಪ್ರಕರಣ ಪತ್ತೆಯಾಗಿದೆ.

16,994 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 4,30,45,350ಕ್ಕೆ ಏರಿಕೆಯಾಗಿದ್ದು, ಚೇತರಿಕೆ ಪ್ರಮಾಣ ಶೇ, 98.49 ರಷ್ಟಿದೆ.

ಸದ್ಯ ದೇಶದಲ್ಲಿ 1,39,073 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ನಿನ್ನೆ ದಿನ 1,36,076 ಸಕ್ರಿಯ ಪ್ರಕರಣ ದಾಖಲಾಗಿತ್ತು.  ಕಳೆದ 24 ಗಂಟೆಗಳಲ್ಲಿ 2,997 ಸಕ್ರಿಯ ಪ್ರಕರಣಗಳ ಏರಿಕೆಯಾಗಿದೆ.  47 ಮಂದಿ ಸಾವಿನೊಂದಿಗೆ ದೇಶದಲ್ಲಿ ಮೃತರ ಒಟ್ಟಾರೇ ಸಂಖ್ಯೆ 5,25,604ಕ್ಕೆ ಏರಿಕೆಯಾಗಿದೆ.

ಇಂದು ದೈನಂದಿನ ಪಾಸಿಟಿವಿ ದರ ಶೇ. 4.44 ರಷ್ಟಿದೆ.  ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಪ್ರಕಾರ, ನಿನ್ನೆಯವರೆಗೂ 86,86,15,168 ಸ್ಯಾಂಪಲ್ಸ್ ಗಳ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಒಟ್ಟಾರೇ 4,50,820 ಸ್ಯಾಂಪಲ್ಸ್ ಗಳ ಪರೀಕ್ಷೆ ನಡೆಸಲಾಗಿದೆ ಮಾಹಿತಿ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com