ಗುಜರಾತ್ ಚುನಾವಣೆ: 9 ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ

ಮುಂದಿನ ತಿಂಗಳು ನಡೆಯಲಿರುವ ಎರಡು ಹಂತದ ಗುಜರಾತ್ ವಿಧಾನಸಭೆ ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಭಾನುವಾರ ಒಂಬತ್ತು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಧ್ವಜ
ಕಾಂಗ್ರೆಸ್ ಧ್ವಜ
Updated on

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಎರಡು ಹಂತದ ಗುಜರಾತ್ ವಿಧಾನಸಭೆ ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಭಾನುವಾರ ಒಂಬತ್ತು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಒಂಬತ್ತು ಅಭ್ಯರ್ಥಿಗಳ ಬಿಡುಗಡೆಯೊಂದಿಗೆ ಕಾಂಗ್ರೆಸ್ ಗುಜರಾತ್ ವಿಧಾನಸಭೆ ಚುನಾವಣೆಗೆ ಇದುವರೆಗೆ 104 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ನವೆಂಬರ್ 4 ರಂದು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಅದರಲ್ಲಿ 43 ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. 46 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ನವೆಂಬರ್ 10 ರಂದು ಬಿಡುಗಡೆ ಮಾಡಲಾಯಿತು. ಶುಕ್ರವಾರ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈಗ ನಾಲ್ಕನೇ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಅಧಿಕೃತವಾಗಿ ಸಹಿ ಹಾಕಿರುವ ಇತ್ತೀಚಿನ ಮತ್ತು ನಾಲ್ಕನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ದ್ವಾರಕಾದಿಂದ ಮಾಲುಭಾಯಿ ಕಂಡೋರಿಯಾ, ತಲಾಲಾದಿಂದ ಮಾನ್ಸಿನ್ ದೋಡಿಯಾ, ಕೋಡಿನಾರ್ ಎಸ್‌ಸಿಯಿಂದ ಮಹೇಶ್ ಮಕ್ವಾನಾ, ಭಾವನಗರ ಗ್ರಾಮಾಂತರದಿಂದ ರೇವತ್‌ಸಿನ್ ಗೋಹಿಲ್ ಮತ್ತು ಭಾವನಗರ ಪೂರ್ವದಿಂದ ಬಲದೇವ್ ಮಜಿಭಾಯಿ ಸೋಲಂಕಿ ಅವರನ್ನು ಕಣಕ್ಕಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com