ದೇಶ

ಒಡಿಶಾದಲ್ಲಿ ಗುತ್ತಿಗೆ ನೇಮಕಾತಿ ವ್ಯವಸ್ಥೆ ರದ್ದು, 57 ಸಾವಿರ ಗುತ್ತಿಗೆ ನೌಕರರು ಖಾಯಂ

ಒಡಿಶಾದಲ್ಲಿ ಗುತ್ತಿಗೆ ನೇಮಕಾತಿ ವ್ಯವಸ್ಥೆ ರದ್ದು, 57 ಸಾವಿರ ಗುತ್ತಿಗೆ ನೌಕರರು ಖಾಯಂ
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್
Published On :

ಭುವನೇಶ್ವರ್: ಒಡಿಶಾ ಸರ್ಕಾರ ಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು ರದ್ದುಪಡಿಸಿದೆ ಮತ್ತು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ 57 ಸಾವಿರ ನೌಕರರನ್ನು ಕಾಯಂಗೊಳಿಸಿ ಭಾನುವಾರ ಅಧಿಸೂಚನೆ ಹೊರಡಿಸಿದೆ.

ಒಡಿಶಾ ಗ್ರೂಪ್ ಬಿ ಹುದ್ದೆಗಳು(ಒಪ್ಪಂದದ ನೇಮಕಾತಿಗಳು), ನಿಯಮಗಳು, 2013 ಮತ್ತು ಒಡಿಶಾ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳ(ಒಪ್ಪಂದದ ನೇಮಕಾತಿ) ನಿಯಮಗಳು 2013 ಅನ್ನು ಈ ಮೂಲಕ ರದ್ದುಗೊಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಡಿಶಾ ಕ್ಯಾಬಿನೆಟ್ ಗುತ್ತಿಗೆ ನೇಮಕಾತಿಗಳನ್ನು ರದ್ದುಪಡಿಸಲು ಮತ್ತು 57,000 ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ಶನಿವಾರ ಅನುಮೋದನೆ ನೀಡಿತ್ತು.

ಕ್ಯಾಬಿನೆಟ್ ಸಭೆಯ ನಂತರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಡಿಜಿಟಲ್ ಮೋಡ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 1300 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದ್ದರು.

ಅಧಿಸೂಚನೆಯ ಪ್ರಕಾರ, ಈ ನಿಯಮಗಳನ್ನು ಈಗ ಒಡಿಶಾ ಗ್ರೂಪ್ ಬಿ, ಸಿ ಮತ್ತು ಡಿ ಪೋಸ್ಟ್‌ಗಳು(ರದ್ದತಿ ಮತ್ತು ವಿಶೇಷ ನಿಬಂಧನೆಗಳು) ನಿಯಮಗಳು, 2022 ಎಂದು ಕರೆಯಲಾಗುವುದು ಮತ್ತು ಒಡಿಶಾ ಗೆಜೆಟ್‌ನಲ್ಲಿ ಅವುಗಳ ಪ್ರಕಟಣೆಯ ದಿನಾಂಕದಂದು ಜಾರಿಗೆ ಬರಲಿದೆ.

ಆಯಾ ಒಪ್ಪಂದದ ನಿಯಮಗಳ ಅಡಿಯಲ್ಲಿ ಆರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ನಿಯಮಿತ ನೇಮಕಾತಿಗಳನ್ನು ನೀಡಿದ ನೌಕರರಿಗೆ, ಅವರ ಗುತ್ತಿಗೆ ನೇಮಕಾತಿಯ ದಿನಾಂಕವನ್ನು ಪರಿಗಣಿಸಿ ಕಾಲ್ಪನಿಕ ಏರಿಕೆಗಳನ್ನು ನೀಡುವ ಮೂಲಕ ಈ ನಿಯಮಗಳ ಪ್ರಾರಂಭದ ದಿನಾಂಕದಂದು ಅವರ ವೇತನವನ್ನು ನಿಗದಿಪಡಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.