ಲಲಿತ್ ಮೋದಿ- ಸುಶ್ಮಿತಾ ಬ್ರೇಕಪ್?: ಸೋಶಿಯಲ್ ಮೀಡಿಯಾದಲ್ಲಿ ಮಾಜಿ ವಿಶ್ವಸುಂದರಿ ಹೆಸರು ಡಿಲೀಟ್ ಮಾಡಿದ ಐಪಿಎಲ್ ಸಂಸ್ಥಾಪಕ!

ಲಲಿತ್​ ಮೋದಿ ಮತ್ತು ಸುಶ್ಮಿತಾ ಸೇನ್ ​ ಅವರು ಸಿಕ್ಕಾಪಟ್ಟೆ ಆತ್ಮೀಯವಾಗಿ ಪೋಸ್​ ನೀಡಿದ ಒಂದಷ್ಟು ಫೋಟೋಗಳು ವೈರಲ್​ ಆಗಿದ್ದವು. ಆದರೆ ಈಗ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಲಲಿತ್ ಮೋದಿ
ಲಲಿತ್ ಮೋದಿ
Updated on

ನವದೆಹಲಿ: ಕೇವಲ ಒಂದೂವರೆ ತಿಂಗಳ ಹಿಂದೆ ನಟಿ ಸುಶ್ಮಿತಾ ಸೇನ್​ ಮತ್ತು ಐಪಿಎಲ್​ ಸಂಸ್ಥಾಪಕ ಲಲಿತ್​ ಮೋದಿ ಅವರು ಅಚ್ಚರಿಯ ಸುದ್ದಿ ನೀಡಿದ್ದರು. ತಾವಿಬ್ಬರು ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಲಲಿತ್​ ಮೋದಿ ಬಹಿರಂಗ ಪಡಿಸಿದ್ದರು. ಅದನ್ನು ಕೇಳಿ ಎಲ್ಲರೂ ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದರು.

ಲಲಿತ್​ ಮೋದಿ ಮತ್ತು ಸುಶ್ಮಿತಾ ಸೇನ್ ​ ಅವರು ಸಿಕ್ಕಾಪಟ್ಟೆ ಆತ್ಮೀಯವಾಗಿ ಪೋಸ್​ ನೀಡಿದ ಒಂದಷ್ಟು ಫೋಟೋಗಳು ವೈರಲ್​ ಆಗಿದ್ದವು. ಆದರೆ ಈಗ ಇಬ್ಬರ ನಡುವೆ ಬ್ರೇಕಪ್​ ಆಗಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿಯನ್ನೂ ನೆಟ್ಟಿಗರು ಹುಡುಕಿದ್ದಾರೆ. ಅಷ್ಟಕ್ಕೂ ಈ ಜೋಡಿ ಹಕ್ಕಿಗಳ ನಡುವೆ ಅಂಥದ್ದೇನಾಯ್ತು ಎಂಬ ಪ್ರಶ್ನೆ ಮೂಡಿದೆ.

ಸುಶ್ಮಿತಾ ಸೇನ್​ ಜೊತೆ ಪ್ರೀತಿ ಚಿಗುರಿದಾಗ ಲಲಿತ್​ ಮೋದಿ ಸಿಕ್ಕಾಪಟ್ಟೆ ಸಂಭ್ರಮಿಸಿದ್ದರು. ಪ್ರಿಯತಮೆಯ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದರು. ಅಷ್ಟೇ ಅಲ್ಲ, ತಮ್ಮ ಪ್ರೊಫೈಲ್​ Bio ಸೆಕ್ಷನ್​ನಲ್ಲಿ ‘ನನ್ನ ಕ್ರೈಮ್​ ಪಾರ್ಟ್ನರ್​ ಸುಶ್ಮಿತಾ ಸೇನ್​ ಜೊತೆ ಕೊನೆಗೂ ಹೊಸ ಜೀವನ ಪ್ರಾರಂಭಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು. ಈಗ ಏಕಾಏಕಿ ಆ ಸಾಲನ್ನು ಅವರು ಡಿಲೀಟ್​ ಮಾಡಿದ್ದಾರೆ! ಅದನ್ನು ಕಂಡು ಎಲ್ಲರಿಗೂ ಅನುಮಾನ ಮೂಡಿದೆ. ಇಬ್ಬರ ನಡುವೆ ಬ್ರೇಕಪ್​ ಆಗಿದೆ ಎಂಬ ಗಾಸಿಪ್​ ಹರಡಲು ಇದೇ ಕಾರಣವಾಗಿದೆ.

ಜೊತೆಗೆ ಸುಶ್ಮಿತಾ ಜೊತೆಗಿದ್ದ ಡಿಪಿಯನ್ನು ಕಿತ್ತಾಕಿದ್ದಾರೆ. ಅಂದಹಾಗೆ ಸುಶ್ಮಿತಾ ಸೇನ್ ಬಗ್ಗೆ ಹಾಕಿದ್ದ ದೀರ್ಘವಾದ ಪೋಸ್ಟ್ ಮಾತ್ರ ಇನ್ನು ಹಾಗೆ ಇದೆ. ಲಲಿತ್ ಮೋದಿ ಅವರ ಅವರ ಈ ನಡೆ ಇಬ್ಬರ ನಡುವಿನ ಬ್ರೇಕಪ್‌ಗೆ ಪುಷ್ಠಿ ನೀಡಿದೆ. ಇನ್ನು ಅಷ್ಟೆಯಲ್ಲ ಸುಶ್ಮಿತಾ ಸೇನ್ ಪೋಸ್ಟ್‌ಗಳಿಗೆ ಲಲಿತ್ ಮೋದಿ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದರು. ಆದರೀಗ ಯಾವುದೇ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿದ್ದಾರೆ. ಇತ್ತ ಸುಶ್ಮಿತಾ ಸೇನ್ ತನ್ನ ಮಾಜಿ ಬಾಯ್ ಫ್ರೆಂಡ್ ಜೊತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಇಬ್ಬರು ದೂರ ದೂರ ಆಗಿದ್ದಾರೆ ಎನ್ನುವುದನ್ನು ಹೇಳುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com