ಬಿಹಾರ: ಸೇತುವೆ ಕೆಳಗೆ ಸಿಲುಕಿದ ಹಳೆಯ ವಿಮಾನ, ಸಂಚಾರ ಅಸ್ತವ್ಯಸ್ತ!
ಲಖನೌದಿಂದ ಅಸ್ಸಾಂಗೆ ಟ್ರಕ್ನಲ್ಲಿ ಸಾಗಿಸುತ್ತಿದ್ದ ಹಳೆಯ ವಿಮಾನ, ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಸೇತುವೆಯ ಕೆಳಗೆ ಸಿಲುಕಿಕೊಂಡಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋತಿಹಾರಿ: ಲಖನೌದಿಂದ ಅಸ್ಸಾಂಗೆ ಟ್ರಕ್ನಲ್ಲಿ ಸಾಗಿಸುತ್ತಿದ್ದ ಹಳೆಯ ವಿಮಾನ, ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಸೇತುವೆಯ ಕೆಳಗೆ ಸಿಲುಕಿಕೊಂಡಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೋತಿಹಾರಿಯ ಪಿಪರಕೋಠಿ ಬಳಿ ಈ ಘಟನೆ ನಡೆದಿದೆ.
ಮೋತಿಹಾರಿ(ಸದರ್) ಸಹಾಯಕ ಪೊಲೀಸ್ ಅಧೀಕ್ಷಕ(ಎಎಸ್ಪಿ) ರಾಜ್ ಪ್ರಕಾರ, "ಸ್ಕ್ರಾಪ್ ಮಾಡಿದ ವಿಮಾನವನ್ನು ಲಖನೌನಿಂದ ಅಸ್ಸಾಂಗೆ ಟ್ರಕ್ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಮೋತಿಹಾರಿಯ ಪಿಪರಕೋಠಿ ಸೇತುವೆಯ ಕೆಳಗೆ ಟ್ರಕ್ ಸಿಲುಕಿಕೊಂಡಿತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಸೇತುವೆ ಕೆಳಗೆ ವಿಮಾನದ ಹಿಂಭಾಗ ಸಿಲುಕಿಕೊಂಡಿತ್ತು. ಇತರ ಟ್ರಕ್ ಚಾಲಕರು ಮತ್ತು ಸ್ಥಳೀಯರ ನೆರವಿನಿಂದ ನಾವು ಟ್ರಕ್ ತೆರೆವುಗೊಳಿಸಲು ಸಾಧ್ಯವಾಯಿತು.ಕೆಲವು ಗಂಟೆಗಳ ನಂತರ ಸಂಚಾರ ಮರುಸ್ಥಾಪಿಸಲಾಯಿತು ಎಂದು ರಾಜ್ ಹೇಳಿದ್ದಾರೆ.
‘ಚಾಲಕ ಸೇತುವೆಯ ಎತ್ತರವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಟ್ರಕ್ ಸೇತುವೆ ಕೆಳಗೆ ಸಿಲುಕಿಕೊಂಡಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


