ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ನಾಯಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಡೆಲಿವರಿ ಬಾಯ್ ಸಾವು

ನಾಯಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ  ಡೆಲವರಿ ಬಾಯ್ ಕಟ್ಟಡದಿಂದ ಜಿಗಿದಿದ್ದ.  ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ರಾತ್ರಿ ಸಾವನ್ನಪ್ಪಿದ್ದಾನೆ.
Published on

ಹೈದರಾಬಾದ್: ನಾಯಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ  ಡೆಲವರಿ ಬಾಯ್ ಕಟ್ಟಡದಿಂದ ಜಿಗಿದಿದ್ದ.  ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ರಾತ್ರಿ ಸಾವನ್ನಪ್ಪಿದ್ದಾನೆ.

ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ಗ್ರಾಹಕರ ಮನೆ  ಬಾಗಿಲು ತಟ್ಟಿದಾಗ ಜರ್ಮನ್ ಶೆಪರ್ಡ್ ಆತನ ಮೇಲೆ ಎರಗಿತು.  ಭಯಭೀತನಾದ ರಿಜ್ವಾನ್ ಓಡಲು ಆರಂಭಿಸಿದ್ದಾನೆ. ನಾಯಿಯು ತನ್ನನ್ನು ಹಿಂಬಾಲಿಸಿಕೊಂಡು ಓಡಿದೆ, ಈ ವೇಳೆ ಭಯದಿಂದ ಅವನು ಕಟ್ಟಡದಿಂದ ಜಿಗಿದಿದ್ದಾನೆ.

ನಂತರ ಗಾಯಗೊಂಡ ಆತನನ್ನು  ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಯೊಸೌಫ್‌ ಘಡಾ ನಿವಾಸಿ ರಿಜ್ವಾನ್ ಕಳೆದ ಮೂರು ವರ್ಷಗಳಿಂದ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಘಟನೆ ನಡೆದ ತಕ್ಷಣ ಆತನ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

X

Advertisement

X
Kannada Prabha
www.kannadaprabha.com