ಜಮ್ಮು-ಕಾಶ್ಮೀರ: ವಾಹನ ಪಲ್ಟಿ, 23 ಮಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ವಾಹನವೊಂದು ಪಲ್ಟಿಯಾಗಿ ಹೊಡೆದ ಪರಿಣಾಮ ಕನಿಷ್ಠ 23 ಜನರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಥುವಾ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ವಾಹನವೊಂದು ಪಲ್ಟಿಯಾಗಿ ಹೊಡೆದ ಪರಿಣಾಮ ಕನಿಷ್ಠ 23 ಜನರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ದೇವಸ್ಥಾನಕ್ಕೆ ತೆರಳಿದ್ದ ಜನರು ದರ್ಶನದ ಬಳಿಕ ಸರಕು ಸಾಗಿರುವ ವಾಹನದಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಕಶೀದ್ ಗ್ರಾಮದ ಬಸೊಹ್ಲಿ ಪ್ರದೇಶದಲ್ಲಿ ತಿರುವು ತೆಗೆದುಕೊಳ್ಳುವ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

ಈ ವೇಳೆ ವಾಹನದಲ್ಲಿದ್ದ 23 ಮಂದಿ ಗಾಯಗೊಂಡಿದ್ದಾರೆ, ಕೂಡಲೇ ಗಾಯಾಳುಗಳನ್ನು ಬಸೋಲಿ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. 23 ಮಂದಿಯ ಪೈಕಿ ಇದೀಗ ಐವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com