ಅಮೆರಿಕಾದಲ್ಲೂ ರಾಹುಲ್ ಟ್ರಕ್ ಪ್ರಯಾಣ, ಚಾಲಕರೊಂದಿಗೆ ಸಂವಾದ- ವಿಡಿಯೋ

ಇತ್ತೀಚಿಗೆ ಅಮೆರಿಕಾಕ್ಕೆ ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಾಷಿಂಗ್ಟನ್ ನಿಂದ ನ್ಯೂಯಾರ್ಕ್ ವರೆಗೂ ಟ್ರಕ್ ನಲ್ಲಿ ಪ್ರಯಾಣಿಸಿದ್ದಾರೆ.
ಅಮೆರಿಕದಲ್ಲಿ ರಾಹುಲ್ ಟ್ರಕ್ ಯಾತ್ರೆ
ಅಮೆರಿಕದಲ್ಲಿ ರಾಹುಲ್ ಟ್ರಕ್ ಯಾತ್ರೆ

ನವದೆಹಲಿ: ಇತ್ತೀಚಿಗೆ ಅಮೆರಿಕಾಕ್ಕೆ ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಾಷಿಂಗ್ಟನ್ ನಿಂದ ನ್ಯೂಯಾರ್ಕ್ ವರೆಗೂ ಟ್ರಕ್ ನಲ್ಲಿ ಪ್ರಯಾಣಿಸಿದ್ದಾರೆ. ಅಲ್ಲದೇ ಅಮೆರಿಕಾದಲ್ಲಿರುವ ಭಾರತೀಯ ಮೂಲದ ಟ್ರಕ್ ಚಾಲಕರ ಸಮಸ್ಯೆಗಳನ್ನು ಆಲಿಸಿದ್ದಾರೆ.

ಕೆಲದಿನಗಳ ಹಿಂದೆ ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್ ನಲ್ಲಿ ಪ್ರಯಾಣಿಸಿದ್ದ ರಾಹುಲ್, ಡ್ರೈವರ್ ಗಳೊಂದಿಗೆ ಸಂವಾದ ನಡೆಸುವ ಮೂಲಕ ಅವರ ಕುಂದುಕೊರತೆಗಳನ್ನು ಆಲಿಸಿದ್ದರು.

ಭಾರತೀಯ ಹಾಗೂ ವಿದೇಶದಲ್ಲಿನ ಭಾರತೀಯರ ಸಮಸ್ಯೆಗಳನ್ನು ತಿಳಿಯಲು ಟ್ರಕ್ ಯಾತ್ರೆಯನ್ನು ಮುಂದುವರೆಸಿರುವ ರಾಹುಲ್ ಗಾಂಧಿ, ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್‌ಗೆ ಸುಮಾರು 190 ಕಿಮೀ ದೂರ 'ಟ್ರಕ್ ಯಾತ್ರೆ" ನಡೆಸಿದ್ದಾರೆ.

ಈ ಸಂದರ್ಭದಲ್ಲಿ  ಚಾಲಕ ತಲ್ಜಿಂದರ್ ಸಿಂಗ್ ವಿಕ್ಕಿ ಗಿಲ್ ಮತ್ತು ಅವರ ಸಹಚರ ರಂಜೀತ್ ಸಿಂಗ್ ಬಾನಿಪಾಲ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಉಪಾಹಾರ ಗೃಹವೊಂದರಲ್ಲಿ ರುಚಿಕರವಾದ ಉಪಹಾರ ಸೇವನೆಯೊಂದಿಗೆ ಈ ಯಾತ್ರೆ ಅಂತ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com