ಚಲಿಸುತ್ತಿದ್ದ ಕಾರಿನಿಂದ ಕೆರೆನ್ಸಿ ನೋಟುಗಳನ್ನು ರಸ್ತೆಗೆ ಎಸೆದ ವ್ಯಕ್ತಿ! ವಿಡಿಯೋ ವೈರಲ್ 

ಚಲಿಸುತ್ತಿದ್ದ ಕಾರಿನಿಂದ ಕರೆನ್ಸಿ ನೋಟುಗಳನ್ನು ವ್ಯಕ್ತಿಯೊಬ್ಬ ರಸ್ತೆಗೆ ಎಸೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹರಿಯಾಣದ ಗುರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಾರಿನಿಂದ ಕರೆನ್ಸಿ ನೋಟು ಎಸೆಯುತ್ತಿರುವ ವ್ಯಕ್ತಿ
ಕಾರಿನಿಂದ ಕರೆನ್ಸಿ ನೋಟು ಎಸೆಯುತ್ತಿರುವ ವ್ಯಕ್ತಿ
Updated on

ಗುರುಗ್ರಾಮ: ಚಲಿಸುತ್ತಿದ್ದ ಕಾರಿನಿಂದ ಕರೆನ್ಸಿ ನೋಟುಗಳನ್ನು ವ್ಯಕ್ತಿಯೊಬ್ಬ ರಸ್ತೆಗೆ ಎಸೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹರಿಯಾಣದ ಗುರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕಾರಿನ ಡಿಕ್ಕಿಯಲ್ಲಿ ಕುಳಿತ ಮುಖವನ್ನು ಅರ್ಧ ಮುಚ್ಚಿಕೊಂಡಿರುವ ವ್ಯಕ್ತಿಯು ಕರೆನ್ಸಿ ನೋಟುಗಳನ್ನು ರಸ್ತೆಗೆ ಎಸೆದಿದ್ದಾನೆ. ದೆಹಲಿ ನೋಂದಣಿ ಸಂಖ್ಯೆಯ ನೇಮ್ ಫ್ಲೇಟ್ ಹೊಂದಿರುವ ಬಿಳಿ ಬಣ್ಣದ ಕಾರನ್ನು ವಿಡಿಯೋದಲ್ಲಿ ಕಾಣಬಹುದು. ಕಾರಿನಿಂದ ಹಣವನ್ನು ತೆಗೆದು ರಸ್ತೆಗೆ ತೂರುವುದು ವಿಡಿಯೋದಲ್ಲಿದೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಹಿಂದಿ ವೆಬ್ ಸೀರಿಸ್ ಫರ್ಜಿ ಮರು ಸೃಷ್ಟಿ ಬಯಸಿ, ಯುಟ್ಯೂಬರ್ ಜೊರಾವಾರ್ ಸಿಂಗ್ ಕಲ್ಸಿ ಈ ರೀತಿ ರಸ್ತೆಯಲ್ಲಿ ಹಣ ಎಸೆದಿರುವುದಾಗಿ ವರದಿಗಳು ತಿಳಿಸಿವೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com