ಕಾರ್ಮಿಕರ ಕನಿಷ್ಠ ವೇತನ ಶೇ. 24 ರಷ್ಟು ಹೆಚ್ಚಿಸಿದ ಗುಜರಾತ್ ಸರ್ಕಾರ

ನುರಿತ, ಅರೆ-ಕುಶಲ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ನೀಡಲಾಗುವ ಕನಿಷ್ಠ ವೇತನವನ್ನು ಸುಮಾರು ಶೇಕಡಾ 25 ರಷ್ಟು ಹೆಚ್ಚಿಸಲಾಗುವುದು ಎಂದು ಗುಜರಾತ್ ಸರ್ಕಾರ ಸೋಮವಾರ ರಾಜ್ಯ ವಿಧಾನಸಭೆಗೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗಾಂಧಿನಗರ: ನುರಿತ, ಅರೆ-ಕುಶಲ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ನೀಡಲಾಗುವ ಕನಿಷ್ಠ ವೇತನವನ್ನು ಸುಮಾರು ಶೇಕಡಾ 25 ರಷ್ಟು ಹೆಚ್ಚಿಸಲಾಗುವುದು ಎಂದು ಗುಜರಾತ್ ಸರ್ಕಾರ ಸೋಮವಾರ ರಾಜ್ಯ ವಿಧಾನಸಭೆಗೆ ತಿಳಿಸಿದೆ.

ಒಂಬತ್ತು ವರ್ಷಗಳ ಅಂತರ ಗುಜರಾತ್ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಿದ್ದು, ಹದಿನೈದು ದಿನಗಳೊಳಗೆ ಅಧಿಸೂಚನೆ ಹೊರಡಿಸಿದ ನಂತರ ಜಾರಿಗೆ ಬರಲಿದೆ ಎಂದು ಗುಜರಾತ್ ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಲ್ವಂತಸಿಂಗ್ ರಜಪೂತ್ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಈ ವೇತನ ಹೆಚ್ಚಳದಿಂದ ಸುಮಾರು 2 ಕೋಟಿ ಜನರಿಗೆ ಅನುಕೂಲವಾಗಲಿದೆ. 1948ರ ಕನಿಷ್ಠ ವೇತನ ಕಾಯ್ದೆಯಲ್ಲಿ ಪಟ್ಟಿ ಮಾಡಲಾದ 46 ವಿವಿಧ ಕ್ಷೇತ್ರಗಳಲ್ಲಿ ಮುನ್ಸಿಪಲ್ ಕಾರ್ಪೊರೇಶನ್‌, ಪುರಸಭೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವ ನುರಿತ ಕಾರ್ಮಿಕರಿಗೆ, ಸರ್ಕಾರವು ಕನಿಷ್ಠ ಮಾಸಿಕ ವೇತನವನ್ನು ರೂ 9,887.80 ರಿಂದ ರೂ 12,324 ರೂ.ಗೆ ಹೆಚ್ಚಿಸಿದೆ. ಒಟ್ಟು 2,436.20 ರೂ. ಅಥವಾ ಶೇ. 24.63 ರಷ್ಟು ಹೆಚ್ಚಿಸಲಾಗಿದೆ.

ಅರೆ-ಕುಶಲ ಕಾರ್ಮಿಕರ ಕನಿಷ್ಠ ಮಾಸಿಕ ವೇತನವನ್ನು ರೂ 9,653.80 ರಿಂದ ರೂ. 11,986 ರೂ.ಗೆ ಹೆಚ್ಚಿಸಿದೆ. ಒಟ್ಟು 2,332.20 ರೂ. ಅಥವಾ ಶೇಕಡಾ 24.15 ರಷ್ಟು ಹೆಚ್ಚಾಗಿದೆ.

ಕೌಶಲ್ಯರಹಿತ ಕಾರ್ಮಿಕರಿಗೆ, ಮಾಸಿಕ ವೇತನವನ್ನು 9,445.80 ರಿಂದ ರೂ 11,752 ರೂ.ಗೆ ಹೆಚ್ಚಿಸಲಾಗಿದೆ. ಇದು ಶೇ. 24.41 ರಷ್ಟು ಏರಿಕೆಯಾಗಿದೆ ಎಂದು ರಜಪೂತ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com