ಮಣಿಪುರ: ರಜೆ ಮೇಲಿದ್ದ ಸಿಆರ್‌ಪಿಎಫ್  ಕಮಾಂಡೋ ಗುಂಡಿಕ್ಕಿ ಹತ್ಯೆ

ಈಶಾನ್ಯ ರಾಜ್ಯ ಮಣಿಪುರದಲ್ಲಿ ರಜೆ ಮೇಲಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ  ಕಮಾಂಡೋವನ್ನು ಸಶಸ್ತ್ರ ದಾಳಿಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಣಿಪುರ: ಈಶಾನ್ಯ ರಾಜ್ಯ ಮಣಿಪುರದಲ್ಲಿ ರಜೆ ಮೇಲಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ  ಕಮಾಂಡೋವನ್ನು ಸಶಸ್ತ್ರ ದಾಳಿಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಕಮಾಂಡೋ ಅವರ ಸ್ವಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. 

204 ನೇ ಕೋಬ್ರಾ ಬೆಟಾಲಿಯನ್‌ನ ಡೆಲ್ಟಾ ಕಂಪನಿಯ ಕಾನ್‌ಸ್ಟೆಬಲ್ ಚೋನ್‌ಖೋಲೆನ್ ಹಾಕಿಪ್ ಮಧ್ಯಾಹ್ನ 3 ಗಂಟೆಗೆ ಹತ್ಯೆಗೀಡಾದರು ಎಂದು ಅವರು ಹೇಳಿದರು. ಅವರು ಯಾವ ಸಂದರ್ಭಗಳಲ್ಲಿ ಕೊಲ್ಲಲ್ಪಟ್ಟರು ಎಂಬುದು ಸ್ಪಷ್ಟವಾಗಿಲ್ಲ, ಆದರೆ ಪೊಲೀಸರಂತಹ ವೇಷ  ಧರಿಸಿದ ಕೆಲವು ದುಷ್ಕರ್ಮಿಗಳು ಅವರ ಗ್ರಾಮಕ್ಕೆ ಪ್ರವೇಶಿಸಿ ಕೊಂದಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋಬ್ರಾ ಗೆರಿಲ್ಲಾ ತಂತ್ರಗಳು ಮತ್ತು ಜಂಗಲ್ ವಾರ್‌ಫೇರ್‌ನಲ್ಲಿ ಪ್ರವೀಣರಾಗಿರುವ ಭಾರತದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ ವಿಶೇಷ ಕಾರ್ಯಾಚರಣೆ ಘಟಕವಾಗಿದೆ ಮತ್ತು  ದೈಹಿಕವಾಗಿ ಸದೃಢವಾಗಿರುವವರು ಈ ಘಟಕಕ್ಕೆ ಸೇರಬಹುದು. ಅದರ 10 ಬೆಟಾಲಿಯನ್‌ಗಳಲ್ಲಿ ಹೆಚ್ಚಿನವು ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಲ್ಲಿ ಮಾವೋವಾದಿ-ವಿರೋಧಿ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲ್ಪಟ್ಟಿವೆ. ಜೊತೆಗೆ ದೇಶದ ಈಶಾನ್ಯ ಭಾಗದಲ್ಲಿ ಬಂಡುಕೋರರ ಕಾರ್ಯಾಚರಣೆಗಾಗಿ ಕೆಲವು ಘಟಕಗಳನ್ನು ನಿಯೋಜಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com